Advertisement

ಪತ್ನಿಯ ಫೋಟೋವನ್ನು ಡೇಟಿಂಗ್‌ ಸೈಟ್‌ಗೆ ಹಾಕಿದ ಭಂಡ ಅರೆಸ್ಟ್‌ !

03:09 PM Jun 03, 2018 | |

ಬೆಂಗಳೂರು: ವೈಮನಸ್ಸಿನಿಂದ ದೂರಾದ ಪತ್ನಿಯ ಮೇಲೆ ಸೇಡು ತೀರಿಸಿಕೊಳ್ಳುಲು ಮುಂದಾದ ಭಂಡನೊಬ್ಬ ಆಕೆಯ ಫೋಟೋಗಳನ್ನು ಡೇಟಿಂಗ್‌ ವೆಬ್‌ಸೈಟ್‌ಗೆ ಹಾಕಿ ಕಿರುಕುಳಕ್ಕೊಳಗಾಗುವಂತೆ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. 

Advertisement

ತೀರ್ಥಹಳ್ಳಿ ಮೂಲದ ವಿನಯ್‌ ಎಂಬಾತ ಕೃತ್ಯ ಎಸಗಿದ್ದು, ಪತ್ನಿ ನೀಡಿರುವ ದೂರಿನನ್ವಯ ತನಿಖೆ ನಡೆಸಿದ ಸೈಬರ್‌ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ವಿನಯ್‌ನೊಂದಿಗೆ ಭಿನ್ನಾಭಿಪ್ರಾಯದಿಂದಲಾಗಿ ಪತ್ನಿ ದೂರವಾಗಿದ್ದರು ಎಂದು ತಿಳಿದು ಬಂದಿದ್ದು, ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು ಆಕೆಗೆ ಕಿರುಕುಳ ನೀಡುತ್ತಿದ್ದ. ಲೊಕ್ಯಾಂಟೋ ಎಂಬ ಡೇಟಿಂಗ್‌ ಸೈಟ್‌ನಲ್ಲಿ ಪತ್ನಿಯ ಫೋಟೋ ಮತ್ತು ಫೋನ್‌ನಂಬರ್‌ ಹಾಕಿದ್ದ. ನಂಬರ್‌ ನೋಡಿದ್ದ ಹಲವು ಪುರುಷರು ಆಕೆಗೆ ಕರೆ ಮಾಡಿದ್ದರು.ಇದರಿಂದ ತೀವ್ರ ಕಿರುಕುಳಕ್ಕೊಳಗಾದ ಆವರು ಸೈಬರ್‌ ಕ್ರೈಂ ಪೊಲೀಸರ ಮೊರೆ ಹೋಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next