ನವದೆಹಲಿ:ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಯಾವುದೇ ಪ್ರಶ್ನೆಯಾಗಲಿ, ನೆರವಿಗಾಗಲಿ ತಕ್ಷಣ ಪ್ರತಿಕ್ರಿಯೆ ನೀಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಅದೇ ರೀತಿ ಕೇಂದ್ರ ಸಚಿವೆ ಸುಷ್ಮಾ ಅವರ ಕಾಲೆಳೆದ ವ್ಯಕ್ತಿಯೊಬ್ಬರಿಗೆ ಅಷ್ಟೇ ತಮಾಷೆಯಾಗಿ ಉತ್ತರ ನೀಡಿರುವ ಪ್ರಸಂಗವೊಂದು ನಡೆದಿದೆ!
ಸುಮಾರು 8 ಲಕ್ಷ ಟ್ವೀಟರ್ ಅಭಿಮಾನಿಗಳನ್ನು ಸುಷ್ಮಾ ಸ್ವರಾಜ್ ಹೊಂದಿದ್ದಾರೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಾಮಾಜಿಕ ಜಾಲತಾಣವಾದ ಟ್ವೀಟರ್ ಮೂಲಕ ನೆರವು ಕೋರುತ್ತಾರೆ. ಮತ್ತು ಅದಕ್ಕೆ ಕೂಡಲೇ ಪ್ರತಿಕ್ರಿಯಿಸುವ ಮೂಲಕ ಜನಾನುರಾಗಿಯಾಗಿದ್ದಾರೆ.
ಹೀಗೆ ವ್ಯಕ್ತಿಯೊಬ್ಬರು ನಾನು ಮಂಗಳ ಗ್ರಹದಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ ಎಂದು ಗುರುವಾರ ಕೇಂದ್ರ ಸಚಿವೆ ಸುಷ್ಮಾ ಅವರಿಗೆ ಟ್ವೀಟ್ ಮಾಡಿ ಟೀಕಿಸಿದ್ದ. ಅದಕ್ಕೆ ಸುಷ್ಮಾ ಅವರು, ನಮ್ಮ ದೇಶದ ಪ್ರಜೆಗಳು ಯಾವುದೇ ಗ್ರಹದಲ್ಲಿ ಸಿಲುಕಿಕೊಂಡಿದ್ದರು ಭಾರತೀಯ ರಾಯಭಾರಿ ಕಚೇರಿ ಅವರ ನೆರವಿಗೆ ಧಾವಿಸಲಿದೆ ಎಂದು ಉತ್ತರ ನೀಡಿದ್ದಾರೆ.!
(ಇದನ್ನೂ ಓದಿ:ಸೆಕ್ಸ್, ಡೀಲ್.. ಬಂಧಿತರಿಂದ 3 ನಿಗೂಢ ಕೊಲೆ ರಹಸ್ಯ ಬಯಲು, ಜೈಲುಪಾಲು!)