Advertisement
ಜಾಕ್ ಅಲ್ಟ್ ಮನ್ ಎಂಬ ಟ್ವಿಟ್ಟರ್ ಬಳಕೆದಾರ, ನಿಮ್ಮ ಅಭಿವೃದ್ದಿಗೆ ಪೋಷಕರು ನೀಡಿರುವ ಅತೀ ಮುಖ್ಯ ಕೊಡುಗೆ ಯಾವುದೆಂದು ಭಾವಿಸುವಿರಾ? ಎಂಬ ಪ್ರಶ್ನೆಯೊಂದನ್ನು ಕೇಳಿದ್ದರು. ಇದಕ್ಕೆಸುದರ್ಶನ್ ಕಾರ್ತಿಕ್ ಎಂಬ ಯುವಕ ಪ್ರತಿಕ್ರಿಯೆ ನೀಡಿದ್ದು ಪ್ರೇರಕದಾಯಕ ಕಥೆಯೊಂದನ್ನು ಹಂಚಿಕೊಂಡಿದ್ದಾರೆ.
Related Articles
Advertisement
ಪ್ರೀತಿಯ ಸುದರ್ಶನ್,
ಚಿಂತಿಸಬೇಡ, ನಿನ್ನ ಕೈಲಾದ ಪ್ರಯತ್ನ ಮಾಡಿರುತ್ತೀಯಾ ಎಂದು ನನಗೆ ತಿಳಿದಿದೆ. ಎರಡು ದಿನಗಳಲ್ಲಿ 1500 ಅಭ್ಯರ್ಥಿಗಳನ್ನು ಸಂದರ್ಶಿಸಿದಾಗ ಈ ರೀತಿಯ ಘಟನೆಗೆಳು ಸಂಭವಿಸುತ್ತವೆ. ಅದು ಸಾಮಾನ್ಯ ಕೂಡ. ನಿನ್ನ ಶೈಕ್ಷಣಿಕ ಪ್ರಗತಿ/ದಾಖಲೆ ಅತ್ಯುತ್ತಮವಾಗಿದೆ. ಒಂದು ಉತ್ತಮ ಅವಕಾಶಕ್ಕಾಗಿ ಎದುರು ನೋಡುತ್ತಿರು ಮತ್ತು ಆ ದೇವರು ನಿನಗೆ ಉತ್ತಮವಾದುದನ್ನೇ ನೀಡುತ್ತಾನೆ. ನಿನ್ನ ಮನದಲ್ಲಿ ಪ್ರೆಶ್ನೆಗಳಿರಬಹುದು. ಇತರರಿಗಿಂತ ನಾನೇಗೆ ಹಿಂದುಳಿದೆ? ಎಂದು. ಯಾರಿಗೆ ತಿಳಿದಿದೆ-ಇದು ನಿನ್ನ ಜೀವನದ ತಿರುವು ಪಡೆಯುವ ವೇದಿಕೆಗಳಾಗಿರಲೂಬಹುದು. ನಿನಗೆ ಉತ್ತಮ ಉದ್ಯೋಗ ಬೇಕಾದರೆ ಮುಂದಿನ ಕ್ಯಾಂಪಸ್ ನಲ್ಲಿ ಪ್ರಯತ್ನ ಮಾಡು. ಇಲ್ಲವಾದಲ್ಲಿ ಉನ್ನತ ಶಿಕ್ಷಣ ಮಾಡುವತ್ತ ಗಮನ ಹರಿಸು. ಯಾವುದೇ ರೀತಿಯ ಹಣದ ಸಮಸ್ಯೆಯಿಲ್ಲ. ಜೀವನದಲ್ಲಿ ಒಂದು ಬ್ರೇಕ್ ಬೇಕಾದರೆ ಮನೆಗೆ ಬಾ. ಬರುತ್ತೀಯಾ ? ಬರುವುದಾದರೆ ತಿಳಿಸು !. ಜಗತ್ತಿನ ಯಾವುದೇ ವ್ಯಕ್ತಿಯೊಡನೇ ನಿನ್ನನನ್ನು ನೀನು ಹೋಲಿಸಿಕೊಳ್ಳಬೇಡ. ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ಜೀವನ ಮೌಲ್ಯವನ್ನು ಹೊಂದಿರುತ್ತಾನೆ. ಇದನ್ನು ನನ್ನ ಅನುಭವದ ಆಧಾರದ ಮೇಲೆ ಹೇಳುತ್ತಿದ್ದೇನೆ. ನಿನಗೆ ಮುಂದೊಂದು ದಿನ ಉತ್ತಮ ಅವಕಾಶ ಸಿಕ್ಕೆ ಸಿಗುತ್ತದೆ. ದಯವಿಟ್ಟು ವಿಶ್ರಾಂತಿ ತೆಗೆದುಕೊ, ಚೆನ್ನಾಗಿ ಊಟ ಮಾಡು, ಅನ್ಯಾಯವನ್ನು ಮರೆತುಬಿಡು, ಜೀವನವನ್ನು ಆನಂದಿಸು. ಈ ಮೊದಲು ನಾನು ಕೂಡ ನನ್ನ ಮಗನಿಗೇನಾಯಿತು ಎಂದು ಆಲೋಚಿಸಿದೆ. ನಂತರ ನನ್ನ ಅನುಭವದ ಮೂಲಕ ತಿಳಿಯಿತು, ಆ ದೇವರು ಉತ್ತಮ ಅವಕಾಶ ನೀಡುವುದಕ್ಕಾಗಿಯೇ ಈ ರೀತಿ ಮಾಡಿದ್ದಾನೆ ಎಂದು. ನೀನೀಗ ವಿದ್ಯಾರ್ಥಿ ಜೀವನದಿಂದ ಜಗತ್ತಿಗೆ ಪ್ರವೇಶಿಸುತ್ತಿದ್ದಿಯಾ. ನಿನಗೀಗ ತಾಳ್ಮೆ ಮತ್ತು ಪರಿಣಾಮಕಾರಿ ಪ್ರಯತ್ನ ಬಹುಮುಖ್ಯವಾಗಿ ಬೇಕು. ಸೆಪ್ಟೆಂಬರ್ 30 ರ ಮೊದಲು ನಿನಗೆ ಉತ್ತಮ ಕೆಲಸ ಸಿಗುವುದು ಖಚಿತ.
ಮತೊಮ್ಮೆ ದಯವಿಟ್ಟು ಹಿಂದಿನ ಘಟನೆ ಮರೆತುಬಿಡು, ಖುಷಿಯಾಗಿರು, ಇಷ್ಟಪಟ್ಟಿದ್ದನ್ನು ತಿನ್ನು. ಚೆನ್ನಾಗಿ ಯೋಚಿಸು, ಅರಾಮಾದಾಯಕವಾಗಿ ನಿದ್ರಿಸು, ಇದು ನಿನ್ನ ಜೀವನದ ಅತೀ ಮುಖ್ಯ ಘಟ್ಟ, ಇತರರೊಂದಿಗೆ ನಿನ್ನನ್ನು ನೀನು ಹೋಲಿಕೆ ಮಾಡಿಕೊಳ್ಳುವುದರೊಂದಿಗೆ ಜೀವನವನ್ನು ಹಾಳು ಮಾಡಿಕೊಳ್ಳಬೇಡ.
ಶುಭವಾಗಲಿ.
ಟ್ವೀಟ್ಟರ್ ನಲ್ಲಿ ಈ ಪೋಸ್ಟ್ ಶೇರ್ ಅದ ತಕ್ಷಣ 4500 ಕ್ಕಿಂತ ಹೆಚ್ಚು ಲೈಕ್ ಪಡೆದಿದ್ದು, ಹಲವರು ಕಮೆಂಟ್ಸ್ ಮೂಲಕ ಸುದರ್ಶನ್ ಅವರನ್ನು ಅಭಿನಂದಿಸಿದ್ದಾರೆ, ಈ ರೀತಿಯ ಬೆಂಬಲ ನೀಡುವ ತಂದೆ ಅಥವಾ ಸ್ನೇಹಿತರಿದ್ದಾಗ ನೀನು ಜೀವನದಲ್ಲಿ ಜಯಿಸಿದ್ದೀಯಾ ಎಂದೇ ಅರ್ಥ. ಉತ್ತಮ ವ್ಯಕ್ತಿಗಳು ನಮ್ಮ ಜೊತೆಗಿದ್ದಾಗ ಯಶಸ್ಸೆಂಬುದು ಹುಡುಕಿಕೊಂಡು ಬರುವುದು ಎಂದು ಒಬ್ಬರು ತಿಳಿಸಿದ್ದಾರೆ.