Advertisement

Kerala ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿಗೆ ಮರಣದಂಡನೆ ಶಿಕ್ಷೆ

11:09 AM Nov 15, 2023 | Shreeram Nayak |

ಕೊಚ್ಚಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಅಪರಾಧಿಯೊಬ್ಬನಿಗೆ ಕೇರಳದ ನ್ಯಾಯಾಲಯವು ಮಂಗಳವಾರ ಮರಣದಂಡನೆ ವಿಧಿಸಿದೆ.

Advertisement

ಬಿಹಾರದ 5 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಂದ ಅಪರಾಧಿ ಅಶ್ವಕ್ ಆಲಂನನ್ನು ಗಲ್ಲಿಗೇರಿಸುವಂತೆ ವಿಶೇಷ ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ನ್ಯಾಯಾಲಯದ ನ್ಯಾಯಾಧೀಶ ಕೆ ಸೋಮನ್ ಆದೇಶಿಸಿದ್ದಾರೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ (ಪಿಪಿ) ಜಿ ಮೋಹನರಾಜ್ ಹೇಳಿದ್ದಾರೆ.

ಬಿಹಾರದ ವಲಸೆ ಕಾರ್ಮಿಕ ಆಲಂಗೆ ನೀಡಿದ ಶಿಕ್ಷೆಯ ವಿವರಗಳನ್ನು ನೀಡಿದ ಪ್ರಾಸಿಕ್ಯೂಟರ್, ಭಾರತೀಯ ದಂಡ ಸಂಹಿತೆ ಮತ್ತು ಪೋಕ್ಸೋ ಅಡಿಯಲ್ಲಿ ಅತ್ಯಾಚಾರ ಮತ್ತು ತೀವ್ರತರವಾದ ಲೈಂಗಿಕ ದೌರ್ಜನ್ಯದ ವಿವಿಧ ಅಪರಾಧಗಳಿಗಾಗಿ ಅಪರಾಧಿಗೆ ಐದು ಜೀವಾವಧಿ ಶಿಕ್ಷೆಯನ್ನು ನೀಡಲಾಗಿದೆ. ಆದರೆ ಮರಣದಂಡನೆ ಶಿಕ್ಷೆಯನ್ನು ಕೇರಳ ಹೈಕೋರ್ಟ್‌ ಖಚಿತಪಡಿಸಿದರೆ ಮಾತ್ರ ಶಿಕ್ಷೆ ಜಾರಿಯಾಗಲಿದೆ ಎಂದು ಮೋಹನರಾಜ್ ಮಾಧ್ಯಮಗಳಿಗೆ ತಿಳಿಸಿದರು.

ಜೀವಾವಧಿ ಶಿಕ್ಷೆ ಎಂದರೆ ಅಪರಾಧಿ ತನ್ನ ಸಹಜ ಜೀವನ ಪರ್ಯಂತ ಜೈಲಿನಲ್ಲಿಯೇ ಇರಬೇಕಾಗುತ್ತದೆ ಎಂದು ನ್ಯಾಯಾಲಯ ಆದೇಶಿಸಿದೆ ಎಂದು ಹೇಳಿದ್ದಾರೆ.

ನ್ಯಾಯಾಲಯವು ಅಪರಾಧಿಗೆ ₹ 6 ಲಕ್ಷಕ್ಕೂ ಹೆಚ್ಚು ದಂಡವನ್ನು ವಿಧಿಸಿದೆ ಎಂದು ಅವರು ಹೇಳಿದರು.

Advertisement

ಮಕ್ಕಳ ದಿನಾಚರಣೆ ದಿನದಂದೇ ನೀಡಿದ ಶಿಕ್ಷೆಯನ್ನು ಮಕ್ಕಳ ಮೇಲೆ ದೌರ್ಜನ್ಯ ನಡೆಸುವವರಿಗೆ ಬಲವಾದ ಎಚ್ಚರಿಕೆಯಾಗಿ ನೋಡಬೇಕು. ಮಗು ಅತ್ಯಂತ ಘೋರ ಅಪರಾಧಕ್ಕೆ ಬಲಿಯಾಗಿದೆ ಮತ್ತು ಅಪರಾಧಿಗೆ ಗರಿಷ್ಠ ಶಿಕ್ಷೆಯನ್ನು ನೀಡಲು ಇಡೀ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ಸಮರ್ಥವಾಗಿ ಕೆಲಸ ಮಾಡಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.

ಜು. 28 ರಂದು ಅಪ್ರಾಪ್ತ ಬಾಲಕಿಯನ್ನು ಬಾಡಿಗೆ ಮನೆಯಿಂದ ಅಪಹರಿಸಿದ ನಂತರ ಆಕೆಯ ಮೇಲೆ ಅತ್ಯಾಚಾರ ನಡೆಸಿ ಕತ್ತು ಹಿಸುಕಿ ಹತ್ಯೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next