ಹಾಸನ: ಕೋವಿಡ್ ನಿಯಂತ್ರಿಸಲು ವಿಧಿಸಲಾಗಿರುವ ಲಾಕ್ ಡೌನ್ ಬಹಳಷ್ಟು ಜನರ ನೆಮ್ಮದಿಗೆಡಿಸಿದೆ. ಕೆಲಸ ಕಾರ್ಯವಿಲ್ಲದೆ ದಿನದೂಡುವುದೇ ಕಷ್ಟವಾಗಿದೆ. ಆದರೆ ಇಲ್ಲೊಂದು ಮನೆಯಲ್ಲಿ ಲಾಕ್ ಡೌನ್ ಸಂತಸಕ್ಕೆ ಕಾರಣವಾಗಿದೆ. ಮನೆ ಬಿಟ್ಟು ಹೋಗಿದ್ದ ಮಗ 22 ವರ್ಷಗಳ ನಂತರ ಮನೆಗೆ ವಾಪಸ್ಸಾಗಿದ್ದು ಹೆತ್ತವರಲ್ಲಿ ಸಂತಸ ಮೂಡಿಸಿದೆ.
ಹಾಸನ ತಾಲೂಕು ಶಾಂತಿಗ್ರಾಮ ಹೋಬಳಿ ಹೊಂಗರೆ ಗ್ರಾಮದ ರಾಜೇಗೌಡ ಮತ್ತು ಅಕ್ಕಯ್ಯಮ್ಮ ದಂಪತಿ ಪುತ್ರ ಶೇಖರ್ (38) ಮನೆಗೆ ವಾಪಸ್ಸಾದವ.
ಇದನ್ನೂ ಓದಿ:ಸ್ಯಾಂಡಲ್ ವುಡ್ ನಿರ್ಮಾಪಕ ಚಂದ್ರಶೇಖರ್ ನಿಧನ
ಈತ, 18 ವರ್ಷದವನಿದ್ದಾಗಲೇ ಮನೆ ಬಿಟ್ಟು ಹೋಗಿದ್ದ. ಆದರೆ, ಈಗ ಲಾಕ್‌ಡೌನ್ ಜಾರಿಯಾದ ಸಂದರ್ಭದಲ್ಲಿ ದಿಢೀರನೆ ಮನೆಗೆ ವಾಪಸ್ಸಾಗಿದ್ದಾನೆ. ಮಗ ಬದುಕಿದ್ದಾನೋ ಇಲ್ಲವೋ ಎಂಬ ಚಿಂತೆಯಲ್ಲಿದ್ದ ವೃದ್ಧ ದಂಪತಿಗೆ ಮಗ ವಾಪಸ್ಸಾಗಿರುವುದು ಸಂತಸ ತಂದಿದೆ.
ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಶೇಖರ್ ವಿವಿಧ ಕೆಲಗಳನ್ನು ಮಾಡಿಕೊಂಡು ದಿನ ದೂಡುತ್ತಿದ್ದ ಎನ್ನಲಾಗಿದೆ.
ಇದನ್ನೂ ಓದಿ:ಮೊದಲು ಕೊವಿಶೀಲ್ಡ್ ಪಡೆದು, 2ನೇ ಬಾರಿ ಕೊವ್ಯಾಕ್ಸಿನ್ ಪಡೆಯಬಹುದೇ? ಇಲ್ಲಿದೆ ಪರಿಹಾರ