Advertisement

ವೈರಲ್ ವೀಡಿಯೋ; ಹೆಣ್ಣು ಬೀದಿ ನಾಯಿ ಮೇಲೆ ಅತ್ಯಾಚಾರ, ಮುಂಬೈ ಯುವಕನ ಬಂಧನ

09:30 AM Aug 25, 2019 | Nagendra Trasi |

ಮುಂಬೈ:ಹೆಣ್ಣು ಬೀದಿ ನಾಯಿ ಮೇಲೆ ಅತ್ಯಾಚಾರ ಹಾಗೂ ಬಲವಂತವಾಗಿ ಮುಖರತಿಯಲ್ಲಿ ತೊಡಗಿದ್ದ ಪೈಶಾಚಿಕ ಪ್ರಕರಣದಲ್ಲಿ ಮಹಾರಾಷ್ಟ್ರ ಪೊಲೀಸರು 20 ವರ್ಷದ ಯುವಕನೊಬ್ಬನನ್ನು ಬಂಧಿಸಿರುವ ಘಟನೆ ನಡೆದಿದೆ.

Advertisement

ಈ ಕಾಮುಕನ ಘಟನೆ ಬಯಲಾಗಿದ್ದು ಹೇಗೆ ಗೊತ್ತಾ?

ಮಹಾರಾಷ್ಟ್ರದ ಖರಘರ್ ಪ್ರದೇಶದ ಸೆಕ್ಟರ್ 4ಕ್ಕೆ ಆಗಸ್ಟ್ 15ರಂದು ವಿದ್ಯಾರ್ಥಿಗಳ ಗುಂಪಿನ ಜತೆ ಭೇಟಿ ನೀಡಿದ್ದರು. ಈ ವೇಳೆ ತಾವು ಕಂಡ ಪೈಶಾಚಿಕ ಘಟನೆಯ ಬಗ್ಗೆ ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ ಮೆಂಟ್ ಆಫ್ ಅನಿಮಲ್ಸ್(ಪೆಟಾ) ಕಾರ್ಯಕರ್ತ ವಿಜಯ್ ರಂಗಾರೆ ಅವರ ಗಮನಸೆಳೆದಿದ್ದರು.

ಖರಘರ್ ಪ್ರದೇಶದಲ್ಲಿ 20 ವರ್ಷದ ಕಾಮುಕ ಯುವಕ ಹೆಣ್ಣು ಬೀದಿ ನಾಯಿ ಮೇಲೆ ಬಲವಂತದಿಂದ ಅತ್ಯಾಚಾರ ಎಸಗಲು ಯತ್ನಿಸುತ್ತಿದ್ದುದನ್ನು ವಿದ್ಯಾರ್ಥಿಗಳು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದರು. ಅದನ್ನು ಇಂಟರ್ನೆಟ್ ನಲ್ಲಿ ಅಪ್ ಲೋಡ್ ಮಾಡಿಬಿಟ್ಟಿದ್ದರು! ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ರಂಗಾರೆ ಪೊಲೀಸರನ್ನು ಭೇಟಿಯಾಗಿ ದೂರು ನೀಡಿದ್ದರು.

ಐಪಿಸಿ ಸೆಕ್ಷನ್ 377(ಪ್ರಾಣಿಗಳ ಜತೆ ಲೈಂಗಿಕ ಕ್ರಿಯೆ ನಡೆಸುವುದು) ಪ್ರಕಾರ ಆರೋಪಿ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಒಂದು ವೇಳೆ ಆರೋಪ ಸಾಬೀತಾದರೆ ಹತ್ತು ವರ್ಷ ಜೈಲುಶಿಕ್ಷೆ ಅನುಭವಿಸಬೇಕಾಗುತ್ತದೆ.

Advertisement

ಈ ಯುವಕ ಹಿಂದೆಯೂ ಇದೇ ರೀತಿ ಪ್ರಾಣಿಗಳ ಮೇಲೆ ಲೈಂಗಿಕ ಅತ್ಯಾಚಾರ ನಡೆಸಿರಬಹುದು. ಒಂದು ವೇಳೆ ಈತನನ್ನು ಬಿಡುಗಡೆ ಮಾಡಿದರೆ ಮನುಷ್ಯರ ಮೇಲೆಯೂ ಇದೇ ರೀತಿ ವರ್ತನೆ ತೋರಬಹುದು ಎಂದು ಪೆಟಾ ಆರೋಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next