ಜೈಪುರ : ಭಾರತೀಯ ಸೇನೆಗೆ ಇನ್ನಷ್ಟು ಬಲ ಬಂದಿದ್ದು, ಮಾನವ ಸಾಗಿಸಬಹುದಾದ ಆ್ಯಂಟಿ ಟ್ಯಾಂಕ್ ಗೈಡೆಡ್ ಕ್ಷಿಪಣಿಯನ್ನು ಗುರುವಾರ ರಾಜಸ್ಥಾನದ ಮರುಭೂಮಿಯಲ್ಲಿ ಯಶಸ್ವಿಯಾಗಿ ಪರೀಕ್ಷೆ ಮಾಡಲಾಗಿದೆ.
ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಓ)ಅಭಿವೃದ್ಧಿ ಪಡಿಸಿದ ಕ್ಷಿಪಣಿ ಇದಾಗಿದ್ದು, ಕಡಿಮೆ ತೂಕ ಉಳ್ಳದ್ದಾಗಿದೆ. ಸೊಸ ಮಾದರಿಯ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗಿದೆ. ಅತ್ಯಾಧುನಿಕ ರಕ್ಷಣಾ ಗುಣಮಟ್ಟಗಳನ್ನು ಕ್ಷಿಪಣಿ ಹೊಂದಿದೆ. ಎರಡರಿಂದ ಮೂರು ಕಿ.ಮೀ ದೂರಕ್ಕೆ ಚಿಮ್ಮುವ ಸಾಮರ್‌ಧ್ಯವನ್ನು ಕ್ಷಿಪಣಿ ಹೊಂದಿದೆ.
ಕ್ಷಿಪಣಿ ಪರೀಕ್ಷೆಯ ಯಶಸ್ಸಿನಲ್ಲಿ ವಿ.ಎಸ್.ಎನ್ ಮೂರ್ತಿ ಅವರು ಕಾರ್ಯಕ್ರಮ ನಿರ್ದೇಶಕ ಮತ್ತು ಯೋಜನಾ ನಿರ್ದೇಶಕರಾಗಿ ಕೆ.ಇ.ಕಪಾಡಿಯಾ ಅವರು ಕಾರ್ಯ ನಿರ್ವಹಿಸಿದ್ದಾರೆ. ಕ್ಷಿಪಣಿ ತಂತ್ರಗಾರಿಕಾ ವ್ಯವಸ್ಥೆಯ ಎಂ.ಎಸ್.ಆರ್ ಪ್ರಸಾದ್ ಅವರು ಸಂಪೂರ್ಣ ನಿರ್ದೇಶನ ನೀಡಿದ್ದರು.
ಈ ಕ್ಷಿಪಣಿಗಳ ಭಾರೀ ಪ್ರಮಾಣದ ಉತ್ಪಾದನೆ 2021 ರಿಂದ ಆರಂಭವಾಗಲಿದೆ ಎಂದು ತಿಳಿದು ಬಂದಿದೆ. 2017 ರಲ್ಲಿ ಈ ಯೋಜನೆಗಾಗಿ 500 ಮಿಲಿಯನ್ ಯುಎಸ್ ಡಾಲರ್ ಡೀಲ್ ಮಾಡಿತ್ತು.