Advertisement

ಹುಣಸೂರು: ಅಪರಿಚಿತ ಕಾರು ಢಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಸಾವು

05:00 PM Jun 12, 2022 | Team Udayavani |

ಹುಣಸೂರು: ಅಪರಿಚಿತ ಕಾರು ಢಿಕ್ಕಿ ಹೊಡೆದ ಪರಿಣಾಮ ತೀವ್ರಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ನಗರದ ಸಮೀಪದ ಮೂಕನಹಳ್ಳಿ ಗೇಟ್ ನಲ್ಲಿ ನಡೆದಿದೆ.

Advertisement

ಪಿರಿಯಾಪಟ್ಟಣ ತಾಲೂಕಿನ ಸೂಳೆಕೋಟೆಯ ಅಪ್ಪಾಜಾಚಾರಿಯವರ ಪುತ್ರ ರಾಜಾಚಾರಿ (58) ಮೃತಪಟ್ಟ ದುರ್ದೈವಿ.

ಘಟನೆ ವಿವರ: ಮೈಸೂರು- ಬಂಟ್ವಾಳ ಹೆದ್ದಾರಿ- 275 ರ ಮೂಕನಹಳ್ಳಿ ಗೇಟ್ ಬಳಿ ಇರುವ ಗ್ರೀನ್ ಲ್ಯಾಂಡ್ ಹೋಟೆಲ್ ಬಳಿ ರಾಜಾಚಾರಿ ಜೂ. 8 ರಾತ್ರಿ 11 ರ ಸಮಯದಲ್ಲಿ  ಮೂತ್ರವಿಸರ್ಜನೆ ಮಾಡುತ್ತಿದ್ದ ವೇಳೆ ಮೈಸೂರು ಕಡೆಯಿಂದ ವೇಗವಾಗಿ ಬಂದ ಬಿಳಿ ಬಣ್ಣದ ನೋಂದಣಿಯಾಗಿರದ ಕಾರು ಢಿಕ್ಕಿ ಹೊಡೆದ ರಭಸಕ್ಕೆ ತಲೆ, ಕೈ,ಕಾಲುಗಳಿಗೆ ತೀವ್ರ ಪೆಟ್ಟಾಗಿತ್ತು. ಅಪಘಾತ ನಡೆಸಿದ  ಕಾರಿನ ಚಾಲಕ ಕಾರು ನಿಲ್ಲಿಸದೆ‌ ಕೊಡಗಿನ ಕಡೆಗೆ ಹೊರಟು ಹೋಗಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ‌ ನಗರ ಠಾಣೆ ಪೊಲೀಸರು ಗ್ರೀನ್ ಲ್ಯಾಂಡ್ ಹೋಟೆಲ್ ಸಿ.ಸಿ ಕ್ಯಾಮರಾದ ಪುಟೇಜ್ ಪರಿಶೀಲಿಸಿದ ವೇಳೆ ಅಪಘಾತ ನಡೆಸಿದ ಕಾರು ಅಪಘಾತ ನಡೆದ ಸ್ವಲ್ಪ ಹೊತ್ತಿನ ವರೆಗೆ ಅಲ್ಲೇನಿಂತು. ಯಾರೂ ಬರದಿದ್ದರಿಂದ ಪರಾರಿಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಪತ್ತೆಗೆ ಕ್ರಮವಹಿಸಿದ್ದಾರೆ.

ಹುಣಸೂರು ಆಸ್ಪತ್ರೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಂತರ ಶವವನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next