ಮುಂಬೈ: ತಿಂಗಳಿಗೆ ಹದಿಮೂರು ಸಾವಿರ ಸಂಬಳ ಪಡೆಯುತ್ತಿರುವ ಸರಕಾರಿ ಗುತ್ತಿಗೆ ನೌಕರನೋರ್ವ ತಾನು ಕೆಲಸ ಮಾಡುತ್ತಿರುವ ಇಲಾಖೆಗೆ ಕೋಟಿ ಕೋಟಿ ಹಣ ವಂಚನೆ ಮಾಡಿ ತನ್ನ ಗೆಳತಿಗೆ ಬಿಎಂಡಬ್ಲ್ಯೂ ಕಾರು ಜೊತೆಗೆ ವಿಮಾನ ನಿಲ್ದಾಣದ ಬಳಿಯೇ ನಾಲ್ಕು ಬೆಡ್ ರೂಮಿನ ಫ್ಲಾಟ್ ಸೇರಿದಂತೆ ಇನ್ನು ಅನೇಕ ಐಷಾರಾಮಿ ಗಿಫ್ಟ್ ಗಳನ್ನು ನೀಡಿರುವ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದ್ದು, ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿ ಗುತ್ತಿಗೆ ನೌಕರ ಸೇರಿದಂತೆ ಮೂವರು ತಲೆಮರೆಸಿಕೊಂಡಿದ್ದಾರೆ.
ಏನಿದು ಘಟನೆ:
ಹರ್ಷ್ ಕುಮಾರ್ ಕ್ಷೀರಸಾಗರ್ ಎಂಬ ಯುವಕ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿರುವ ವಿಭಾಗೀಯ ಕ್ರೀಡಾ ಸಂಕೀರ್ಣದಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಗುತ್ತಿಗೆ ನೌಕರನಾಗಿ ಕೆಲಸ ಮಾಡಿಕೊಂಡಿದ್ದ, ಆತ ತಿಂಗಳಿಗೆ 13,000 ಸಂಬಳ ಪಡೆಯುತ್ತಿದ್ದ ಆದರೆ ಅಲ್ಲೇ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿಕೊಂಡಿದ್ದ ಮಹಿಳೆ ಜೊತೆ ಸೇರಿಕೊಂಡು ತಾನು ಕೆಲಸ ಮಾಡುವ ಇಲಾಖೆಗೆ ಇಂಟರ್ ನೆಟ್ ಬ್ಯಾಂಕಿಂಗ್ ಮೂಲಕ 21 ಕೋಟಿ ರೂಪಾಯಿ ವಂಚಿಸಿದ್ದಾನೆ.
ಇದರಲ್ಲಿ ಬಂದ ಹಣದಿಂದ ಒಂದು ಬಿಎಂಡಬ್ಲ್ಯೂ ಕಾರು ಖರೀಸಿಡಿಸಿದ್ದು ಜೊತೆಗೆ ತನ್ನ ಗೆಳತಿಗೆ ಮುಂಬೈ ವಿಮಾನ ನಿಲ್ದಾಣದ ಪಕ್ಕದಲ್ಲೇ ನಾಲ್ಕು ಬೆಡ್ ರೂಮ್ ನ ಫ್ಲಾಟ್ ಒಂದನ್ನು ಖರೀಸಿದಿದ್ದಾನೆ ಜೊತೆಗೆ ಗೆಳತಿಗೋಸ್ಕರ ಡೈಮಂಡ್ ಫ್ರೇಮ್ ಹೊಂದಿರುವ ಕನ್ನಡಕದ ಫ್ರೇಮ್ ಕೂಡ ಮಾಡಿಸಿದ್ದ ಎನ್ನಲಾಗಿದೆ. ಜೊತೆಗೆ ಆತನ ಜೊತೆಗೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಪತಿ ಸುಮಾರು 35 ಲಕ್ಷ ರೂಪಾಯಿ ಮೌಲ್ಯದ ಐಷಾರಾಮಿ ಕಾರನ್ನು ಖರಿಸಿದ್ದರು ಎನ್ನಲಾಗಿದೆ.
ಕ್ರೀಡಾ ಇಲಾಖೆಯ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅದಕ್ಕೆ ಬೇಕಾದ ಕ್ರೀಡಾ ಇಲಾಖೆಯ ನಿರ್ದೇಶಕರ ಸಹಿಯನ್ನು ನಕಲಿ ಮಾಡಿಕೊಂಡು ಬಳಿಕ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಇಲಾಖೆಗೆ ಬರುವ ಕೋಟಿ ಕೋಟಿ ಹಣವನ್ನು ಲಪಟಾಯಿಸಿದ್ದಾರೆ, ಆದರೆ ಇಷ್ಟೆಲ್ಲಾ ವಂಚನೆ ನಡೆದರೂ ಕ್ರೀಡಾ ಇಲಾಖೆಗೆ ಗೊತ್ತಾಗಲೇ ಇಲ್ಲ ಇಲಾಖೆಗೆ ಗೊತ್ತಾಗುವಷ್ಟರಲ್ಲಿ ಸುಮಾರು ಆರು ತಿಂಗಳು ಕಳೆದಿತ್ತು ಇದೀಗ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇತ್ತ ತಮ್ಮ ಕೃತ್ಯ ಬಹಿರಂಗಗೊಳ್ಳುತ್ತಿದ್ದಂತೆ ಎಚ್ಚೆತ್ತ ಆರೋಪಿಗಳು ಪೊಲೀಸರ ಕಣ್ಣು ತಪ್ಪಿಸಿ ತಲೆಮರೆಸಿಕೊಂಡಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯಿಂದ ಆರೋಪಿಗಳು ಇಲಾಖೆಗೆ 21 ಕೋಟಿ ರೂಪಾಯಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ ಇದರ ನಡುವೆ ಆರೋಪಿಗಳು ಐಷಾರಾಮಿ ಕಾರು, ಫ್ಲಾಟ್ ಖರೀದಿಸಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: Martin: ಕಿರುತೆರೆಯಲ್ಲಿ ಧೂಳೆಬ್ಬಿಸಲು ಬರುತ್ತಿದೆ ಧ್ರುವ ಸರ್ಜಾ ನಟನೆಯ ʼಮಾರ್ಟಿನ್ʼ