Advertisement

ಭೂಮಿಪೂಜೆಗಾಗಿ ಮುಸ್ಲಿಂ ವ್ಯಕ್ತಿ 800 ಕಿ.ಮೀ. ಪಯಣ

02:32 AM Jul 28, 2020 | Hari Prasad |

ಅಯೋಧ್ಯೆ: ರಾಮಜನ್ಮಭೂಮಿ ಅಯೋಧ್ಯೆ ಭಾವೈಕ್ಯ ಧಾಮವಾಗಿಯೂ ಸೆಳೆಯುತ್ತಿದೆ.

Advertisement

ಆಗಸ್ಟ್‌ 5ರಂದು ನಡೆಯಲಿರುವ ಐತಿಹಾಸಿಕ ರಾಮ ಮಂದಿರದ ಭೂಮಿ ಪೂಜೆಯಲ್ಲಿ ಪಾಲ್ಗೊಳ್ಳಲು ಮುಸ್ಲಿಂ ವ್ಯಕ್ತಿಯೊಬ್ಬರು 800 ಕಿ.ಮೀ. ದೂರದಿಂದ ಆಗಮಿಸುತ್ತಿದ್ದಾರೆ.

ಶ್ರೀರಾಮನ ತಾಯಿ ಕೌಸಲ್ಯೆಯ ಹುಟ್ಟೂರು ಎಂದೇ ಕರೆಯಲ್ಪಡುವ ಛತ್ತೀಸ್‌ಗಢದ ಚಾಂದ್ಖರಿಯಿಂದ ಮೊಹ್ಮದ್‌ ಫೈಝ್ ಖಾನ್‌ ಅಯೋಧ್ಯೆ ಮಂದಿರದ ಭೂಮಿಪೂಜೆಗೆ ಪವಿತ್ರ ಮೃತ್ತಿಕೆಯನ್ನು ಹೊತ್ತು ತರುತ್ತಿದ್ದಾರೆ.

ರಾಮನ ಭಕ್ತ!: ‘ನನ್ನ ಹೆಸರು ಧರ್ಮದ ಕಾರಣಕ್ಕಾಗಿ ಇಸ್ಲಾಂನಂತಿದ್ದರೂ ನಾನು ರಾಮನ ಪರಮಭಕ್ತ. ನನ್ನ ಪೂರ್ವಜರು ಹಿಂದೂಗಳಾಗಿದ್ದರು. ಅವರ ಹೆಸರು ರಾಮ್‌ಲಾಲ್‌ ಅಥವಾ ಶಾಮ್‌ಲಾಲ್‌ ಇದ್ದಿರಬಹುದೆಂದು ನನ್ನ ಹಳ್ಳಿಯವರಿಂದ ಕೇಳಲ್ಪಟ್ಟೆ.

ನಾವು ಚರ್ಚಿಗೆ ಹೋಗಲಿ, ಮಸೀದಿಗೇ ಹೋಗಲಿ, ನಾವೆಲ್ಲರೂ ಹಿಂದೂ ಮೂಲವನ್ನು ಹೊಂದಿದ್ದೇವೆ’ ಎಂದು ಆಂಗ್ಲ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Advertisement

ಮಸೀದಿಗಳ ಕೋಮು ಸೌಹಾರ್ದ: ಭೂಮಿ ಪೂಜೆ ಸಮೀಪಿಸುತ್ತಿದ್ದಂತೆ ಅಯೋಧ್ಯೆಯಲ್ಲಿನ ಮಸೀದಿಗಳು ಕೋಮು ಸೌಹಾರ್ದದ ಸಂದೇಶ ಸಾರುತ್ತಿವೆ.

‘ಇಲ್ಲಿ ಮುಸ್ಲಿಮರ ಧಾರ್ಮಿಕ ಕಾರ್ಯಗಳನ್ನು ಅನ್ಯಧರ್ಮೀಯರು ಗೌರವಿಸುತ್ತಾರೆ. ನಾವು ಕೂಡ ಕೋಮು ಸೌಹಾರ್ದತೆಯನ್ನು ಸಾರುತ್ತಿದ್ದೇವೆ. ರಾಮ ದೇಗುಲದ ಸುತ್ತಮುತ್ತಲಿನ ಮಸೀದಿಗಳ ಕೋಮು ಸೌಹಾರ್ದ ನಿಲುವು ಅಯೋಧ್ಯೆಯ ಶ್ರೇಷ್ಠತೆಗೆ ಸಾಕ್ಷಿ’ ಎಂದು ರಾಮ್‌ಕೋಟ್‌ ವಾರ್ಡ್‌ನ ಕಾರ್ಪೊರೇಟರ್‌ ಹಾಜಿ ಅಸಾದ್‌ ಅಹ್ಮದ್‌ ‘ಪಿಟಿಐ’ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next