ಮಹಾರಾಷ್ಟ್ರ: ಕಾರಿನ ಹೆಡ್ ಲೈಟ್ ವಿಚಾರದಲ್ಲಿ ಆಕ್ರೋಶಗೊಂಡ ರಾಜ್ಯ ಮೀಸಲು ಪೊಲೀಸ್ ಪಡೆ(ಎಸ್ ಆರ್ ಪಿಎಫ್) ಯೋಧ ವ್ಯಕ್ತಿಯೊಬ್ಬರ ಕೆನ್ನೆಗೆ ಹೊಡೆದ ಪರಿಣಾಮ ಸ್ಥಳದಲ್ಲೇ ಕೊನೆಯುಸಿರೆಳೆದಿರುವ ಘಟನೆ ನಾಗ್ಪುರದಲ್ಲಿ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:Woman Biker: ನಿಯಮ ಉಲ್ಲಂಘನೆ, ಬೈಕ್ ನಿಲ್ಲಿಸಿದ ಟ್ರಾಫಿಕ್ ಪೊಲೀಸರಿಗೆ ಅವಾಜ್ ಹಾಕಿದ ಯುವತಿ
ನಾಗ್ಪುರದ ಮಾತಾ ಮಂದಿರ ಪ್ರದೇಶದ ವಾಥೋಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆರೋಪಿ, ಯೋಧ ನಿಖಿಲ್ ಗುಪ್ತಾ (30ವರ್ಷ) ತನ್ನ ಸಹೋದರಿ ಮನೆಗೆ ಭೇಟಿ ನೀಡಲು ಕಾರಿನಲ್ಲಿ ಆಗಮಿಸಿದ್ದು, ಕಾರನ್ನು ಪಾರ್ಕಿಂಗ್ ಮಾಡಿದ್ದ. ಆದರೆ ಕಾರಿನ ಹೆಡ್ ಲೈಟ್ ಎದುರು ನಿಂತಿದ್ದ ಮುರಳಿಧರ್ ರಾಮ್ ರಾವ್ ಜೀ ಅವರ ಕಣ್ಣಿಗೆ ಕುಕ್ಕುತ್ತಿತ್ತು. ಆಗ ಮುರಳಿಧರ್ ಅವರು ಕಾರಿನ ಹೆಡ್ ಲೈಟ್ ಆಫ್ ಮಾಡುವಂತೆ ವಿನಂತಿಸಿಕೊಂಡಿದ್ದರು.
ಆದರೆ ಗುಪ್ತಾ ಹೆಡ್ ಲೈಟ್ ಆಫ್ ಮಾಡುವುದಿಲ್ಲ ಎಂದಾಗ ಇಬ್ಬರ ನಡುವೆ ವಾಗ್ವಾದ ನಡೆದು, ಕೊನೆಗೆ ಗುಪ್ತಾ ಮುರಳಿಧರ್ ಅವರ ಕಪಾಳಕ್ಕೆ ಹೊಡೆದುಬಿಟ್ಟಿತ್ತ. ಬಲವಾದ ಹೊಡೆತದ ಪರಿಣಾಮ ಮುರಳಿಧರ್(54ವರ್ಷ) ಅವರು ಕುಸಿದುಬಿದ್ದು ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದರು. ಬಳಿಕ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದು, ಅವರು ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿರುವುದಾಗಿ ವರದಿಯಾಗಿದೆ.
ಆರೋಪಿ ನಿಖಿಲ್ ಗುಪ್ತಾ ವಿರುದ್ಧ ಐಪಿಸಿ ಸೆಕ್ಷನ್ 304ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.