Advertisement

ರಾಜಸ್ಥಾನ ಕೋಟ : ರೈಲಿನಡಿ ಬಿದ್ದು ಕುಡುಕನ ಸಾವು

05:48 PM Oct 29, 2018 | udayavani editorial |

ಕೋಟಾ, ರಾಜಸ್ಥಾನ : 31ರ ಹರೆಯದ ವ್ಯಕ್ತಿಯೋರ್ವ ನಗರದ ಡಿಸಿಎಂ ಫ್ಲೈ ಓವರ್‌ ಕೆಳಗೆ ರೈಲಿನಡಿ ಬಿದ್ದು  ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಮೃತ ವ್ಯಕ್ತಿಯನ್ನು ಸತ್ಯನಾರಾಯಣ ಸೋನಿ ಎಂದು ಗುರುತಿಸಲಾಗಿದೆ. ಈತ ಕೋಟ ನಗರದ ಛವಾನಿ ರಾಮಚಂದ್ರಪುರ ಪ್ರದೇಶದ ನಿವಾಸಿ ಎಂದು ಗೊತ್ತಾಗಿದೆ. 

ಕುಡಿದ ಮತ್ತಿನಲ್ಲಿ ಸೋನಿ ರೈಲು ಹಳಿಯಲ್ಲಿ ನಡೆದು ಹೋಗುತ್ತಿದ್ದಾಗ ಆತ ಮೇಲೆ ರೈಲು ಹರಿದು ಆತ ಮೃತಪಟ್ಟನೆಂದು ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next