ರಾಯಪುರ: ಮಗ ಸತ್ತ ಬಳಿಕ ಒಬ್ಬಂಟಿಯಾಗಿದ್ದ 22 ವರ್ಷದ ಸೊಸೆಯನ್ನು ಆಕೆಯ ಮಾವನೇ ಮದುವೆಯಾದ ಘಟನೆ ಛತ್ತೀಸ್ ಗಡದ ಬಿಲಾಸ್ ಪರದಲ್ಲಿ ನಡೆದಿದೆ.
ಬಿಲಾಸ್ ಪುರ ನಿವಾಸಿಯಾಗಿರುವ ಕೃಷ್ಣ ರಜಪೂತ್ ಸಿಂಗ್ ಎಂಬಾತ ತನ್ನ 22 ವರ್ಷದ ಸೊಸೆ ಆರತಿ ಸಿಂಗ್ ಎಂಬಾಕೆಯೊಂದಿಗೆ ವಿವಾಹವಾಗಿದ್ದಾನೆ.
ಕೃಷ್ಣ ರಜಪೂತ್ ಸಿಂಗ್ ನ ಮಗ ಎರಡು ವರ್ಷದ ಹಿಂದೆ ಅಸುನೀಗಿದ್ದ. ನಂತರ ಆತನ ಸೊಸೆ ಒಂಟಿ ಜೀವನ ನಡೆಸುತ್ತಿದ್ದಳು. ಹೀಗಾಗಿ ವಿಧವೆ ಸೊಸೆಗೆ ಬಾಳು ನೀಡಲು ನಿರ್ಧರಿಸಿದ್ದು, ಮದುವೆಯಾಗಿದ್ದಾನೆ.
ಕಳೆದೆರಡು ವರ್ಷಗಳಿಂದ ಮಾವ ಸೊಸೆಯನ್ನು ಮುತುವರ್ಜಿಯಿಂದ ನೋಡಿಕೊಂಡಿದ್ದಾನೆ. ಹೀಗಾಗಿ ಸೊಸೆಯೂ ಈ ಮದುವೆಗೆ ಒಪ್ಪಿಗೆ ನೀಡಿದ್ದಾಳೆ. ಕುಟುಂಬಸ್ಥರು ಒಟ್ಟಾಗಿ ಮದುವೆ ನಡೆಸಿದ್ದಾರೆ.
ರಜಪೂತ್ ಕ್ಷತ್ರೀಯ ಮಹಾಸಭಾ ಸಮಿತಿಯ ಅಧ್ಯಕ್ಷ ಹರಿ ಸಿಂಗಗ ದೌಡ್ ನೇತೃತ್ವದಲ್ಲಿ ವಿಶಿಷ್ಟ ವಿವಾಹ ಕಾರ್ಯಕ್ರಮ ನಡೆಸಲಾಗಿದೆ. ಕೋವಿಡ್ ಕಾರಣದಿಂದ ಸರಳ ವಿವಾಹ ಕಾರ್ಯಕ್ರಮ ಮಾಡಲಾಗಿದೆ.