Advertisement

ಮಾನವ ನಿರ್ಮಿತ ರಾಕ್ ಗಾರ್ಡನ್: ಇದರ ಸೌಂದರ್ಯಕ್ಕೆ ಮನಸೋಲದವರಿಲ್ಲ !

06:38 PM Sep 27, 2020 | Mithun PG |

ಮಂಗಳೂರು: ಕರ್ನಾಟಕದಿಂದ ಸುಮಾರು 2289 ಕಿ. ಮೀ ದೂರದಲ್ಲಿ ಇರುವ ಚಂಡೀಗಢದ ಸೆಕ್ಟರ್ 1 ರಲ್ಲಿ ರಾಕ್ ಗಾರ್ಡನ್ ನಿರ್ಮಿಸಲಾಗಿದೆ. ನಮ್ಮ ದೇಶವು ನೈಸರ್ಗಿಕ ಪ್ರಕೃತಿ  ಸೌಂದರ್ಯಕ್ಕೆ ಹೆಸರುವಾಸಿಯಾದರೂ, ರಾಕ್ ಗಾರ್ಡನ್ ಮಾನವ ನಿರ್ಮಿತ ಉದ್ಯಾನವನವಾಗಿದೆ. ಇದನ್ನು ನೆಕ್ ಚಂದ್ ಎಂಬುವವರು ನಿರ್ಮಿಸಿದ್ದಾರೆ.

Advertisement

ರಾಕ್ ಗಾರ್ಡನ್ ನಲ್ಲಿ mosaic courtyards ಎಂಬ ಕಲ್ಲು ಮತ್ತು ಹಳೆಯ ಕ್ರೋಕರಿ ಶೈಲಿಯನ್ನು ಬಳಸಿ ಗೊಂಬೆಗಳನ್ನು ತಯಾರಿಸಲಾಗಿದೆ ಹಾಗೆಯೇ ಝರಿಗಳನ್ನು ನಿರ್ಮಿಸಲಾಗಿದೆ. ಝರಿಯ ಸುತ್ತಮುತ್ತ ಹುಲ್ಲುಗಳನ್ನು ಬೆಳೆಸಿ ಸದಾ ಹಚ್ಚಹಸಿರಾಗಿರುವಂತೆ ನೋಡಿಕೊಳ್ಳಲಾಗಿದೆ. ಈ ಉದ್ಯಾನವನವನ್ನು ಸುಮಾರು 24 ಎಕರೆ ಜಾಗದಲ್ಲಿ ನಿರ್ಮಾಣ ಮಾಡಲಾಗಿದೆ. ಪ್ರತಿ ಗೊಂಬೆಯಲ್ಲೂ ಕಲಾಕಾರನ ಕೈಚಳಕ ಎದ್ದುಕಾಣುತ್ತಿದ್ದು ಕಣ್ಮನ ಸೆಳೆಯುತ್ತಿದೆ.

ಉದ್ಯಾನವನದ ಪ್ರವೇಶ ಶುಲ್ಕ ಕೇವಲ 40/- ರೂ. ಮನಸ್ಸಿಗೆ ಮುದ ನೀಡುವ ತಾಣಗಳಲ್ಲಿ ಈ ಉದ್ಯಾನವನವೂ ಒಂದೆನಿಸಿದೆ.

-ಧನ್ಯ ನೂಜಿ

Advertisement

 

Advertisement

Udayavani is now on Telegram. Click here to join our channel and stay updated with the latest news.

Next