Advertisement

ಥಾಣೆ: ಕೇವಲ 1 ರೂ. ಜಗಳ ಪ್ರಾಣವನ್ನೇ ಬಲಿ ಪಡೆಯಿತು !

03:24 PM Feb 03, 2018 | udayavani editorial |

ಥಾಣೆ : ಕೇವಲ ಒಂದು ರೂಪಾಯಿಗಾಗಿ ನಡೆದ ಜಗಳದಲ್ಲಿ ಕಲ್ಯಾಣ್‌ ಪಟ್ಟಣದ 54ರ ಹರೆಯದ ವ್ಯಕ್ತಿಯ ಕೊಲೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

Advertisement

ನಿನ್ನೆ ಶುಕ್ರವಾರ ತಡ ರಾತ್ರಿ ನಡೆದಿದ್ದ ಈ ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಮನೋಹರ ಗಾಮ್‌ನೇ ಎಂದು ಗುರುತಿಸಲಾಗಿದೆ. ಮನೆ ಸಮೀಪದ ಅಂಗಡಿಯಲ್ಲಿ ಮೊಟ್ಟೆ ಕೊಳ್ಳಲು ಆತ ಹೋಗಿದ್ದಾಗ ಈ ಘಟನೆ ನಡೆಯಿತೆಂದು ಥಾಣೆ ಪೊಲೀಸ್‌ ಪಿಆರ್‌ಓ ಸುಖದಾ ನಾರ್ಕರ್‌ ತಿಳಿಸಿದ್ದಾರೆ. 

ಗಾಮ್‌ನೇ ತಾನು ಖರೀದಿಸಿದ ಮೊಟ್ಟೆಗೆ ಒಂದು ರೂಪಾಯಿ ಕಡಿಮೆ ಕೊಟ್ಟದ್ದೇ ಅಂಗಡಿಯಾತನೊಂದಿಗಿನ ಜಗಳಕ್ಕೆ ಕಾರಣವಾಯಿತು. ಈ ಜಗಳ ಪರಾಕಾಷ್ಠೆಗೆ ಹೋದಾಗ ಅಂಗಡಿಯಾತನ ಮಗ ನಾರ್ಕರ್‌ಗೆ ಕಾಲಿನಿಂದ ಒದ್ದು  ಕೈಗಳಿಂದ ಗುದ್ದಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ.  ಪರಿಣಾಮವಾಗಿ ನಾರ್ಕರ್‌ ಸ್ಥಳದಲ್ಲೇ ಮೃತಪಟ್ಟ. 

ಆರೋಪಿ ಸುಧಾಕರ್‌ ಪ್ರಭು (45) ವನ್ನು ಬಂಧಿಸಲಾಗಿದ್ದು ಆತನ ವಿರುದ್ಧ ಕೊಲೆ ಕೇಸನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next