ಲಂಡನ್: ಬ್ರಿಟನ್ ಮಾಜಿ ಗೃಹ ಸಚಿವೆ, ಭಾರತ ಮೂಲದ ಪ್ರೀತಿ ಪಟೇಲ್‌ಗೆ ಬೆದರಿಕೆ ಪತ್ರ ಬರೆದ ಆರೋಪದಲ್ಲಿ ಲಂಡನ್‌ನ ವೆಸ್ಟ್‌ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ 65 ವರ್ಷದ ವ್ಯಕ್ತಿಯೊಬ್ಬರಿಗೆ ಐದು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಪೂನಿರಾಜ್ ಕನಕಯ್ಯ ಶಿಕ್ಷೆಗೆ ಒಳಗಾದವ. ಪ್ರೀತಿ ಪಟೇಲ್ ಅವರು ಬ್ರಿಟನ್ ಗೃಹ ಸಚಿವರಾಗಿದ್ದ ಸಮಯದಲ್ಲಿ ಕಳೆದ ವರ್ಷ ಜ.22ರಂದು ಅವರ ಕಚೇರಿಗೆ ಪತ್ರವೊಂದು ಬಂದಿತ್ತು. ಅದರ ಮೇಲೆ “ಖಾಸಗಿ ಪತ್ರ’ ಎಂದು ಬರೆಯಲಾಗಿತ್ತು. ಅವರ ಸಿಬ್ಬಂದಿ ಪತ್ರ ಓದಿದಾಗ ಬೆದರಿಕೆ ಹಾಕಿದ ಅಂಶ ಬೆಳಕಿಗೆ ಬಂದಿತ್ತು.
ವಿಧಿ ವಿಜ್ಞಾನ ಪರೀಕ್ಷೆಗಳಿಂದ ಈ ಪತ್ರವನ್ನು ಪೂನಿರಾಜ್ ಬರೆದಿರುವುದು ಸಾಬೀತಾಗಿ, ಶಿಕ್ಷೆ ವಿಧಿಸಲಾಗಿದೆ.