Advertisement

ಸಿಗರೇಟು ಸೇದಿದ್ದಕ್ಕೆ 9 ವರ್ಷ ಜೈಲು

01:26 PM May 29, 2017 | Karthik A |

ಲಂಡನ್‌: ‘ಧೂಮಪಾನ ಆರೋಗ್ಯಕ್ಕೆ ಹಾನಿಕರ’ ಎಂಬುದು ಎಲ್ಲರ ಬಾಯಲ್ಲಿ ಸಲೀಸಾಗಿ ಬರುವ ಸ್ಲೋಗನ್‌! ಆದರೆ, ಇದೇ ಧೂಮಪಾನ ವ್ಯಕ್ತಿಯೊಬ್ಬನಿಗೆ 9 ವರ್ಷ 6 ತಿಂಗಳ‌ ಕಾಲ ಜೈಲುಶಿಕ್ಷೆಗೆ ಗುರಿಯಗುವಂತೆ ಮಾಡಿದರೆ? ಹೌದು, ಇಂಗ್ಲೆಂಡ್‌ನ‌ ಚೈನ್‌ಸ್ಮೋಕರ್‌ವೊಬ್ಬ ‘ಸೇದಬಾರದ ಜಾಗದಲ್ಲಿ ಸಿಗರೇಟು ಸೇದಿ’ ಶಿಕ್ಷೆಗೆ ಗುರಿಯಾಗಿದ್ದಾನೆ. ನಮ್ಮಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು ಸೇದಿದರೆ ನೂರೋ, ಐನೂರೋ ದಂಡ ವಿಧಿಸಿ, ಎಚ್ಚರಿಕೆ ಕೊಟ್ಟು ಬಿಡುತ್ತಾರೆ. ಆದರೆ ಆತ, ಸೇದಿದ್ದು ವಿಮಾನದ ಟಾಯ್ಲೆಟ್‌ನಲ್ಲಿ.

Advertisement

ನಿಯಮ ಪ್ರಕಾರ, ವಿಮಾನದಲ್ಲಿ ಧೂಮಪಾನ ಮಾಡುವಂತಿಲ್ಲ. ಆದರೆ ಕಿಡ್ಡರ್‌ಮಿನಿಸ್ಟರ್‌ನ ಜಾನ್‌ ಕಾಕ್ಸ್‌ ಎಂಬಾತ ಮೋನಾರ್ಕ್‌ ಏರ್‌ಬಸ್‌ನ ಟಾಯ್ಲೆಟ್‌ನಲ್ಲಿ ಸಿಗರೇಟು ಸೇದಿ, ಉಳಿದ ತುಂಡನ್ನು ಅಲ್ಲೇ ಇದ್ದ ಡಸ್ಟ್‌ಬಿನ್‌ಗೆ ಹಾಕಿದ್ದಾನೆ. ತತ್‌ಕ್ಷಣವೇ, ಡಸ್ಟ್‌ ಬಿನ್‌ನಲ್ಲಿದ್ದ ಕಾಗದಗಳಿಗೆ ಬೆಂಕಿ ಹೊತ್ತಿಕೊಂಡಿವೆ. ಆಗ ವಿಮಾನದಲ್ಲಿದ್ದ ಬೆಂಕಿ ನಿರೋಧಕ ವ್ಯವಸ್ಥೆ ಜಾಗೃತವಾಗಿ ಫೈರ್‌ ಅಲಾರ್ಮ್ ಆಗಿದೆ. ಕೂಡಲೇ ಪೈಲಟ್‌ ತುರ್ತು ಭೂಸ್ಪರ್ಶಕ್ಕೆ ಮುಂದಾಗಿದ್ದಾನೆ. ಜತೆಗೆ 33 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿರುವ ವಿಮಾನದಲ್ಲಿ ಸಿಗರೇಟು ಸೇದುವುದು ತಪ್ಪಲ್ಲವೇ ಎಂದು ಝಾಡಿಸಿದ್ದಾನೆ. ಆದರೆ ಕಾಕ್ಸ್‌ ಉಡಾಫೆಯ ಉತ್ತರ ಕೊಟ್ಟು ಜಗಳವಾಡಿದ್ದಾನೆ. ಬರ್ಮಿಂಗ್‌ಹ್ಯಾಂ ನಿಂದ 2015ರ ಆಗಸ್ಟ್‌ನಲ್ಲಿ ಹೊರಟಿದ್ದ ಈ ವಿಮಾನ ಈಜಿಪ್ಟ್ನಲ್ಲಿ ಇಳಿದಿದೆ. ಪೊಲೀಸರು ಆತನನ್ನು ಬಂಧಿಸಿ, ಇಂಗ್ಲೆಂಡ್‌ಗೆ ವಾಪಸ್‌ ಕಳುಹಿಸಿದ್ದಾರೆ. ಮೊದಲು ಬರ್ಮಿಂಗ್‌ ಹ್ಯಾಂ ಕೋರ್ಟ್‌, 4 ವರ್ಷ 6 ತಿಂಗಳು ಜೈಲು ವಿಧಿಸಿದೆ. ಈ ಶಿಕ್ಷೆ ಕಡಿಮೆಯಾಯಿತು ಎಂದು ಮೇಲ್ಮನವಿ ಸಲ್ಲಿಸಲಾಗಿದ್ದು, ಕಡೆಗೆ ಈತನಿಗೆ 9 ವರ್ಷ 6 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next