ಬಳ್ಳಾರಿ: ನಗರದ ಗುಗ್ಗರ ಹಟ್ಟಿಯಲ್ಲಿ ಮೆಹಬೂಬ್ ಬಾಷಾ (38) ಎನ್ನುವ ವ್ಯಕ್ತಿಯನ್ನು ಕೊಲೆ ಮಾಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಪ್ರಮುಖ ಆರೋಪಿಯಾದ ಸ್ಥಳೀಯ ನಿವಾಸಿ ಚಿಕನ್ ಅನ್ವರ್ ಅಲಿಯಾಸ್ ಕೋಳಿ ಅನ್ವರ್ ಎನ್ನುವನನ್ನು ಬಂಧಿಸಲಾಗಿದೆ.
ಹತ್ಯೆಯಾಗಿರುವ ಮೆಹಬೂಬ್ ಬಾಷಾ ಬುಧವಾರ ತನ್ನ ಮಗನ ಜನ್ಮದಿನವಿದ್ದ ಕಾರಣ, ಕೇಕ್ ತಂದು ಮನೆಯಲ್ಲೇ ಆಚರಿಸಲು ಸಿದ್ದತೆ ಮಾಡಿಕೊಂಡಿದ್ದರು. ಆದರೆ, ಸಂಜೆ 7.30 ರ ಸುಮಾರಿಗೆ ಮನೆಯ ಬಳಿಗೆ ಬಂದ ಆರೋಪಿ ಅನ್ವರ್ ಸೇರಿ ನಾಲ್ಕೈದು ಜನರ ಗುಂಪು ಮನೆಯಲ್ಲಿದ್ದ ಮೆಹಬೂಬ್ ಬಾಷಾನನ್ನು ಹೊರಗಡೆ ಕರೆದಿದಿದ್ದಾರೆ. ಹೊರಗೆ ಬರುತ್ತಿದ್ದಂತೆ ಕಾದು ಕುಳಿತಿದ್ದ ತಂಡವು ಹಲ್ಲೆಗೆ ಮುಂದಾಗಿದೆ. ಬಾಷಾ ಸ್ಥಳದಿಂದ ಓಡಿ ಹೋದರು ಹಿಂಬಾಲಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ ಎಂದು ಸಂಬಂಧಿ ಮಹ್ಮದ್ ಗೌಸ್, ಸಹೋದರ ತಿಳಿಸಿದ್ದಾರೆ.
ಹತ್ಯೆಯಾದ ಮೆಹಬೂಬ್ ಬಾಷಗೆ ಧೈರ್ಯ ಇಲ್ಲ. ಜಗಳ ಎಂದರೆ ದೂರ ಹೋಗುತ್ತಾನೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಇವನು ಸಹ ಎತ್ತರಕ್ಕೆ ಬೆಳೆದಿದ್ದ. ಇದನ್ನು ಸಹಿಸದೆ ಹೀಗೆ ಮಾಡಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ವಾರ್ಣಿಂಗ್ ನೀಡುತ್ತಲೇ ಇದ್ದರು. ಕಳೆದ ಒಂದು ವಾರದಿಂದ ಸ್ಕೆಚ್ ಹಾಕಿ ಕೊಲೆ ಮಾಡಿದ್ದಾರೆ ಎಂದವರು ತಿಳಿಸಿದ್ದಾರೆ.
ಇದನ್ನೂ ಓದಿ:INDvsWI Test: ಟಾಸ್ ಗೆದ್ದ ವಿಂಡೀಸ್; ಟೆಸ್ಟ್ ಕ್ಯಾಪ್ ಪಡೆದ ಮುಖೇಶ್ ಕುಮಾರ್
ಘಟನೆ ಕುರಿತಂತೆ ಪ್ರತಿಕ್ರಿಯಿಸಿರುವ ಎಸ್ ಪಿ ರಂಜಿತ್ ಕುಮಾರ್ ಬಂಡಾರು ಅವರು, ಮೆಗಬೂಬ್ ಬಾಷಾ ಕೊಲೆಗೆ ರಾಜಕೀಯ ಕಾರಣವಲ್ಲ. ರಿಯಲ್ ಎಸ್ಟೇಟ್ ವ್ಯವಹಾರ ಕಾರಣವಾಗಿದೆ. ಇಬ್ಬರು ಒಂದೇ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದರು. ಪ್ರಮುಖ ಆರೋಪಿ ಅನ್ವರ್ ನ ಹಿಂಬಾಲಕರನ್ನು ಮೆಹಬೂಬ್ ಬಾಷಾ ಕರೆದುಕೊಂಡಿದ್ದನು. ಇದರೊಂದಿಗೆ ನನ್ನ ಎದುರಿಗೆ ಇಷ್ಟೊಂದು ಎತ್ತರಕ್ಕೆ ಬೆಳೆದಿದ್ದನ್ನು ಸಹಿಸಿಲ್ಲ. ಈ ಘಟನೆ ರಾಜಕೀಯ ಪ್ರೇರಿತ ಕಾರಣವಲ್ಲ ಎಂದು ಎಸ್ ಪಿ ರಂಜಿತ್ ಕುಮಾರ್ ಸ್ಪಷ್ಟಪಡಿಸಿದ್ದಾರೆ