Advertisement

Delhi ; ವಿಮಾನದಲ್ಲಿ ಸಹಪ್ರಯಾಣಿಕರೊಂದಿಗೆ ಜಗಳ,ಸೀಟುಗಳಿಗೆ ಹಾನಿ: ಓರ್ವನ ಬಂಧನ

09:17 PM Oct 09, 2023 | Team Udayavani |

ಹೊಸದಿಲ್ಲಿ: ಈಜಿಪ್ಟ್ ಏರ್ ವಿಮಾನದಲ್ಲಿ ಕೆಲವು ಆಸನಗಳನ್ನು ಹಾನಿಗೊಳಿಸಿ, ಸಹ ಪ್ರಯಾಣಿಕರೊಂದಿಗೆ ಜಗಳವಾಡಿದ ಭಾರತೀಯ ವ್ಯಕ್ತಿಯನ್ನು ಇಂದಿರಾಗಾಂಧಿ ಅಂತಾರಾಷ್ಟ್ರೀಯ(ಐಜಿಐ) ವಿಮಾನ ನಿಲ್ದಾಣದಲ್ಲಿ ಸೋಮವಾರ ಬಂಧಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Advertisement

ಭಾನುವಾರ ಬೆಳಗ್ಗೆ 8.30ರ ಸುಮಾರಿಗೆ ವಿಮಾನ ನಿಲ್ದಾಣದಲ್ಲಿ ಎಂಎಸ್-975 (ಕೈರೋದಿಂದ ದೆಹಲಿ) ವಿಮಾನ ಲ್ಯಾಂಡ್ ಆದ ನಂತರ ಈ ಘಟನೆ ವರದಿಯಾಗಿದೆ.

ವಿಮಾನದಲ್ಲಿದ್ದ ಅಶಿಸ್ತಿನ ವರ್ತನೆ ತೋರಿದ ಪ್ರಯಾಣಿಕನ ಬಗ್ಗೆ ಪೈಲಟ್‌ಗಳು ದೆಹಲಿ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಗೆ ಮಾಹಿತಿ ನೀಡಿದರು. ವಿಮಾನಇಳಿದ ಕೂಡಲೇ ಪ್ರಯಾಣಿಕನನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಿಬಂದಿ ವಶಕ್ಕೆ ತೆಗೆದುಕೊಂಡರು. ಹೆಚ್ಚಿನ ತನಿಖೆಗಾಗಿ ದೆಹಲಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕೃತ ಮೂಲಗಳು ಪಿಟಿಐಗೆ ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next