Advertisement

ಮುಂದುವರಿದ ಮರಣ ಮೃದಂಗ: ಹುಬ್ಬಳ್ಳಿಯಲ್ಲಿ ವೆಂಟಿಲೇಟರ್ ಸಿಗದೆ ವ್ಯಕ್ತಿ ಸಾವು!

12:08 PM May 05, 2021 | Team Udayavani |

ಹುಬ್ಬಳ್ಳಿ: ನಗರದ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಸಮಸ್ಯೆ ಉದ್ಭವಿಸಿದ್ದು, ಬುಧವಾರ ಬೆಳಗ್ಗೆ ಧಾರವಾಡದ ವ್ಯಕ್ತಿಯೋರ್ವ ವೆಂಟಿಲೇಟರ್ ಸಿಗದೆ ಕಿಮ್ಸ್ ನಲ್ಲಿ ಮೃತಪಟ್ಟಿದ್ದಾರೆ.

Advertisement

ಕಿಮ್ಸ್ ಆಸ್ಪತ್ರೆಯ 100 ವೆಂಟಿಲೇಟರ್ ಬೆಡ್ ಫುಲ್ ಆಗಿದ್ದು, ಖಾಸಗಿ ಆಸ್ಪತ್ರೆಗಳಲ್ಲೂ ವೆಂಟಿಲೇಟರ್ ಇಲ್ಲ. ಮಂಗಳವಾರ ರಾತ್ರಿಯಿಂದ ವೆಂಟಿಲೇಟರ್ ಬೆಡ್ ಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ವ್ಯಕ್ತಿಯ ಪತ್ನಿ ಮತ್ತು ಸಂಬಂಧಿಕರು ಅಲೆದಾಡಿದರೂ ಎಲ್ಲಿಯು ಬೆಡ್ ವ್ಯವಸ್ಥೆ ಸಿಗಲಿಲ್ಲ.

ಇದನ್ನೂ ಓದಿ:ಮೈಸೂರು-ಚಾ.ನಗರ ಡಿಸಿ ಕಚೇರಿ, ಆಸ್ಪತ್ರೆಯ ಎಲ್ಲಾ ದಾಖಲೆಗಳನ್ನು ಸೀಜ್ ಮಾಡಲು ಹೈಕೋರ್ಟ್ ಆದೇಶ

ಬುಧವಾರ ವ್ಯಕ್ತಿಯನ್ನು ಕಿಮ್ಸ್ ಗೆ ಕರೆದುಕೊಂಡು ಬಂದಿದ್ದ ಮಹಿಳೆ ಮತ್ತು ಸಂಬಂಧಿಕರು ವೆಂಟಿಲೇಟರ್ ಗಾಗಿ ಕಾದು ಕುಳಿತಿದ್ದರು. ಕೊನೆಗೆ ವ್ಯಕ್ತಿಯನ್ನು ವಾರ್ಡ್ ಗೆ ಶಿಫ್ಟ್ ಮಾಡುವಾಗ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next