ಬೆಂಗಳೂರು: ನಮ್ಮ ಮೆಟ್ರೋ ರೈಲಿನಲ್ಲಿ ಆಹಾರ ಸೇವಿಸುತ್ತಿದ್ದ ಪ್ರಯಾಣಿಕನಿಗೆ 500 ರೂ. ದಂಡ ವಿಧಿಸಿದ ನಿಗಮವು(ಬಿಎಂಆರ್‌ಸಿಎಲ್), ನಿಯಮ ಉಲ್ಲಂ ಸಿದ್ದಕ್ಕಾಗಿ ಅತನ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ.
ಮತ್ತೂಂದು ಪ್ರಕರಣದಲ್ಲಿ ಮೆಟ್ರೋದಲ್ಲಿ ಪ್ರಾಂಕ್ ಮಾಡಿದವನ ವಿರುದ್ಧ ಗೋವಿಂದರಾಜ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಿಂಡಿ ತಿಂದು ದಂಡ ಪಾವತಿಗೆ ಗುರಿಯಾದ ಪ್ರಯಾಣಿಕ ನಮ್ಮ ಮೆಟ್ರೋದಲ್ಲಿ ಜಯನಗರ ಮತ್ತು ಸಂಪಿಗೆ ರಸ್ತೆ ನಡುವೆ ನಿತ್ಯ ಪ್ರಯಾಣಿಸುತ್ತಿದ್ದ. ಪ್ರಯಾಣಿಕ ಆಹಾರ ಸೇವಿಸುತ್ತಿರುವಾಗ ಆತನ ಸ್ನೇಹಿತರು ಮೆಟ್ರೋ ಒಳಗೆ ತಿನ್ನದಂತೆ ಸೂಚಿಸಿದ್ದರು. ಆದರೆ, ಇದನ್ನು ನಿರ್ಲಕ್ಷಿಸಿದ ಆತ ಆಹಾರ ಸೇವಿಸಿದ್ದಾನೆ. ಆತ ಆಹಾರ ಸೇವಿಸುವ ವಿಡಿಯೋ ಸೆರೆ ಹಿಡಿದಿದ್ದ ಪ್ರಯಾಣಿಕರು ಅಧಿಕಾರಿಗಳ ಗಮನಕ್ಕೆ ತಂದಿದ್ದರು.
ಮೆಟ್ರೋದಲ್ಲೇ ಪ್ರಾಂಕ್: ಮತ್ತೂಂದು ಪ್ರಕರಣದಲ್ಲಿ ಇತ್ತೀಚೆಗೆ ವಿಜಯನಗರ ಮೆಟ್ರೋ ನಿಲ್ದಾಣಕ್ಕೆ ಬಂದಿದ್ದ ಮೂವರು ಪ್ರಯಾಣಿಕರ ಪೈಕಿ ಪ್ರಾಂಕ್ ಪ್ರಜ್ಜು ಎಂಬಾತ ಬೋಗಿಯಲ್ಲಿರುವ ಹ್ಯಾಂಡಲ್ ಹಿಡಿದು ಜಿಮ್ ಮಾಡುವ ರೀತಿ ತೂಗಾಡಿದ್ದ. ಈ ದೃಶ್ಯವನ್ನು ಆತನ ಸ್ನೇಹಿತರಿಂದ ವಿಡಿಯೋ ಮಾಡಿಸಿದ್ದು, ದುರುದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾನೆ. ಈತನನ್ನು ಠಾಣೆಗೆ ಕರೆಯಿಸಿ, ಸೂಕ್ತ ತಿಳಿವಳಿಕೆ ನೀಡಿ, ಇನ್ನೊಮ್ಮೆ ಈ ರೀತಿ ಮಾಡದಂತೆ ಎಚ್ಚರಿಕೆ ಕೊಡಬೇಕೆಂದು ದೂರಿನಲ್ಲಿ ಉಲ್ಲೇಖೀಸಲಾಗಿದೆ.
ಚಲಿಸುತ್ತಿರುವ ಮೆಟ್ರೋದಲ್ಲಿ ಮೂರ್ಛೆ ಬಂದವರಂತೆ ಪ್ರಾಂಕ್ ಮಾಡಲಾಗಿದೆ. ಇದೇ ವ್ಯಕ್ತಿಯು ಮತ್ತೂಂದು ವಿಡಿಯೋದಲ್ಲಿ ಎಸ್ಕಲೇಟರ್‌ನಲ್ಲಿ ಬರುವಾಗ ವೃದ್ಧೆ ಮುಂದೆ ಪ್ರಾಂಕ್ ಮಾಡಿದ್ದು, ಈ ವೇಳೆ ವೃದ್ಧೆ ಗಾಬರಿಗೊಂಡಿದ್ದಾರೆ. ಬಿಎಂಆರ್‌ಸಿಎಲ್ ಅಧಿಕಾರಿಗಳು ಪ್ರಾಂಕ್ ಮಾಡಿದ ಯುವಕನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆತನ ಹೆಸರು ಪ್ರಾಂಕ್ ಪ್ರಜ್ಜು ಎಂಬುದು ತಿಳಿದು ಬಂದಿದೆ. ಈ ವಿಡಿಯೋವನ್ನು ಆತ ತನ್ನದೇ ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾನೆ.