Advertisement

ಆಂಬ್ಯುಲೆನ್ಸ್ ಧನ ದಾಹ : ಕಾರಿನಲ್ಲಿ ಮಗಳ ಶವ ಸಾಗಿಸಿದ ತಂದೆ

02:23 PM May 26, 2021 | Team Udayavani |

ಜೈಪುರ :  ಆಂಬುಲೆನ್ಸ್ ಗೆ ದುಪ್ಪಟ್ಟು ಹಣ ನೀಡಲು ಸಾಧ್ಯವಾಗದ ಹಿನ್ನೆಲೆ ತಂದೆಯೋರ್ವನು ತನ್ನ ಮಗಳ ಶವವನ್ನು ಕಾರಿನಲ್ಲಿಯೇ ತೆಗೆದುಕೊಂಡು ಹೋಗಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

Advertisement

ಕೋವಿಡ್ ಸೋಂಕಿನಿಂದ ಮೃತ ಪಟ್ಟವರ ಶವ ಸಾಗಿಸಲು ಆಂಬುಲೆನ್ಸ್ ನವರು ದುಪ್ಪಟ್ಟು ಹಣ ಪೀಕುತ್ತಿರುವ ಘಟನೆಗಳು ಮುಂದುವರೆದಿವೆ.  ರಾಜಸ್ಥಾನದ ಜೈಪುರದಲ್ಲಿ ಕೇವಲ 85 ಕಿ.ಮೀ ದೂರ ಶವ ಸಾಗಿಸಲು ಆಂಬುಲೆನ್ಸ್ ಡ್ರೈವರ್ ಗಳು 35 ಸಾವಿರ ರೂ. ಬೇಡಿಕೆ ಇಟ್ಟಿದ್ದಾರೆ.

ಏಪ್ರಿಲ್ 24 ರಂದು ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಸೀಮಾ ಎಂಬುವರನ್ನು ಕೋಟಾದಲ್ಲಿರುವ ಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಕೆ ಚಿಕಿತ್ಸಗೆ ಸ್ಪಂದಿಸದೆ ಭಾನುವಾರ ಕೊನೆಯುಸಿರೆಳೆದಳು. ಈ ವೇಳೆ ಶವವನ್ನು ತಮ್ಮೂರಿಗೆ ತೆಗೆದುಕೊಂಡು ಹೋಗಲು ಆಂಬುಲೆನ್ಸ್ ನವರನ್ನು ಸಂಪರ್ಕಿಸಿದಾಗ, ಅವರು ಹೆಚ್ಚಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಅಷ್ಟು ಹಣ ಕೊಡಲು ಶಕ್ತಿ ಇಲ್ಲದ ಮೃತ ಯುವತಿಯ ತಂದೆ ಕೊನೆಗೆ ತನ್ನ ಕಾರಿನ ಮುಂದಿನ ಸೀಟಿನಲ್ಲಿ ಮಗಳ ಹೆಣ ಇಟ್ಟುಕೊಂಡು ಹೋಗಿದ್ದಾನೆ.

ಈ ಘಟನೆಯ ಫೋಟೊ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಕೋಟಾ ಜಿಲ್ಲಾಧಿಕಾರಿ ಉಜ್ವಲ್ ರಾಥೋಡ್ ತನಿಖೆಗೆ ಆದೇಶಿಸಿದ್ದಾರೆ. ಆಂಬ್ಯುಲೆನ್ಸ್ ಡ್ರೈವರ್ ಗಳ ಕುರಿತು ವಿವರ ನೀಡುವಂತೆ ಮೃತ ಯುವತಿಯ ತಂದೆಗೆ ತಿಳಿಸಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಮೃತ ಯುವತಿಯ ತಂದೆ, ಮಗಳ ಶವ ಸಾಗಿಸಲು ಆಂಬ್ಯುಲೆನ್ಸ್ ನವರು 16,000 ರಿಂದ 35000 ರೂ. ಕೇಳಿದರು. ಅಷ್ಟೊಂದು ಹಣ ನಮ್ಮ ಬಳಿ ಇರಲಿಲ್ಲ.  ಹಾಗಾಗಿ ಅನಿವಾರ್ಯವಾಗಿ ನನ್ನ ಕಾರಿನ ಮುಂದಿನ ಸೀಟಿನಲ್ಲಿ ಇಟ್ಟುಕೊಂಡು ಊರಿಗೆ ತಲುಪಿದೆವು ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next