Advertisement

UAE: ಅರಬ್‌ ಎಮಿರಾಟಿ ಉಡುಗೆಯನ್ನು ತೊಟ್ಟು ದುಬಾರಿ ಕಾರು ಖರೀದಿ ರೀಲ್ಸ್; ವ್ಯಕ್ತಿ ವಶಕ್ಕೆ

02:30 PM Jul 11, 2023 | Team Udayavani |

ಯುಎಇ: ಸೋಶಿಯಲ್‌ ಮೀಡಿಯಾದಲ್ಲಿ ರೀಲ್ಸ್‌ ಗಳು ಬಹುಬೇಗವಾಗಿ ವೈರಲ್‌ ಆಗುತ್ತದೆ. ಏನೇ ಹಾಕಿದರೂ ಅದು ಯಾವ ಸಂದರ್ಭದಲ್ಲಿ ವೈರಲ್‌ ಆಗುತ್ತದೆ ಎನ್ನುವುದನ್ನು ಹೇಳಲಾಗದು. ಆದರೆ ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋಗಳನ್ನು ಹಾಕುವ ಮುನ್ನ ಎಚ್ಚರವಹಿಸಬೇಕು. ವೈರಲ್‌ ಆದ ಬಳಿಕ ಅದರ ವಿರುದ್ಧ ಕೇಳಿಬರುವ ಆಕ್ರೋಶವನ್ನು ಸ್ವೀಕರಿಸಲು ಕೂಡ ನಾವು ಸಿದ್ದರಿರಬೇಕು.

Advertisement

ಇತ್ತೀಚೆಗೆ ಅರಬ್‌ ಎಮಿರಾಟಿ ಉಡುಗೆಯನ್ನು ತೊಟ್ಟು ವ್ಯಕ್ತಿಯೊಬ್ಬ ಕಾರು ಶೋರೂಮ್ ವೊಂದಕ್ಕೆ ಹೋಗುತ್ತಾನೆ. ಆತನ ಹಿಂದೆ ಹಣದ ಕಂತೆಯನ್ನು ಹಿಡಿದುಕೊಳ್ಳಲು ವ್ಯಕ್ತಿಗಳಿರುತ್ತಾರೆ. ಕಾರಿನ ಶಾಪ್‌ ನೊಳಗೆ ಬಂದ ಕೂಡಲೇ ಅಲ್ಲಿರುವ ಸಿಬ್ಬಂದಿ ಕಾಫಿ ಕುಡಿಯೆಂದು ನೋಟಿನ ಕಂತೆಯನ್ನು ಎಸೆಯುತ್ತಾನೆ. ಆ ಬಳಿಕ ಅಲ್ಲಿರುವ ಸಿಬ್ಬಂದಿ ಬಳಿ ಶಾಪ್‌ ನಲ್ಲಿರುವ ಅತ್ಯಂತ ದುಬಾರಿ ಕಾರನ್ನು ತೋರಿಸು ಎನ್ನುತ್ತಾನೆ. ರೋಲ್ಸ್ ರಾಯ್ಸ್ ಸೇರಿದಂತೆ ಇತರ ಎರಡು ಮೂರು ದುಬಾರಿ ಕಾರುಗಳನ್ನು ಖರೀದಿಸುತ್ತಾನೆ. ಈ ವಿಡಿಯೋ ಇನ್ಸ್ಟಾಗ್ರಾಮ್‌ ರೀಲ್ಸ್‌ ನಲ್ಲಿ ಅಪ್ಲೋಡ್‌ ಮಾಡಲಾಗಿದೆ.

ಇದನ್ನೂ ಓದಿ: B’town: ಪಾತ್ರಕ್ಕಾಗಿ ಬೆತ್ತಲೆ ಆಗುವುದು.. ನಗ್ನತೆ ಪ್ರಶ್ನೆಗೆ ನೇರವಾಗಿ ಉತ್ತರಿಸಿದ ನಟಿ

ಈ ವಿಡಿಯೋ ನೋಡಿ ಇವನು ಅರಬ್‌ ದೇಶದ ಶ್ರೀಮಂತ ವ್ಯಕ್ತಿ ಆಗಿರಬಹುದು ಎಂದು ಜನ ಊಹಿಸಿದ್ದಾರೆ. ಈ ವಿಡಿಯೋ ಕೆಲವೇ ದಿನಗಳಲ್ಲಿ ಮಿಲಿಯನ್‌ ಗಟ್ಟಲೇ ವೀವ್ಸ್‌ ಆಗಿದೆ.

ವಿಡಿಯೋ ವೈರಲ್‌ ಆಗುತ್ತಿದ್ದಂತೆ ಇದರ ಸತ್ಯಾಸತ್ಯತೆ ಗೊತ್ತಾಗಿದೆ. ಇದೊಂದು ಸ್ಫೂಫ್‌ ವಿಡಿಯೋ ಎಂದು ಗೊತ್ತಾಗಿದ್ದು, ಪ್ರಚಾರಕ್ಕಾಗಿ ಇದನ್ನು ಮಾಡಲಾಗಿದೆ. ಎಮಿರಾಟಿ ನಾಗರಿಕರಿಗೆ ಅಲ್ಲಿನ ಸಂಪ್ರದಾಯಿಕ ಉಡುಗೆಯನ್ನು ತೊಟ್ಟು ಅವಮಾನ ಮಾಡಲಾಗಿದೆ ಎನ್ನುವ ಟೀಕೆಗಳು ಕೇಳಿ ಬಂದಿದೆ.

Advertisement

ಈ ಹಿನ್ನೆಲೆಯಲ್ಲಿ ವಿಡಿಯೋ ಮಾಡಿದ ವ್ಯಕ್ತಿಯನ್ನು  ಫೆಡರಲ್ ಪ್ರಾಸಿಕ್ಯೂಷನ್ ಆದೇಶದ ಮೇರೆಗೆ ವಶಕ್ಕೆ‌ ಪಡೆಯಲಾಗಿದ್ದು, ಎಮಿರಾಟಿ ಸಮಾಜವನ್ನು “ಅವಮಾನಿಸುವ” ವಿಷಯವನ್ನು ಪ್ರಕಟಿಸಿದ ಆರೋಪದ ಮೇಲೆ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಇದರೊಂದಿಗೆ ಕಾರಿನ ಶೋರೂಮ್ ಮಾಲಕನ್ನು ಈ ಬಗ್ಗೆ ವಿಚಾರಣೆಗೆ ಹಾಜರಾಗಲು ಹೇಳಲಾಗಿದ ಎಂದು “ಡಬ್ಲ್ಯೂಎಎಂ” ವರದಿ ತಿಳಿಸಿದೆ.

ಯುಎಇಯಲ್ಲಿ ವದಂತಿಗಳನ್ನು ಹರಡುವುದು ಮತ್ತು ಸುಳ್ಳು ಮಾಹಿತಿಯನ್ನು ಪ್ರಕಟಿಸುವ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next