Advertisement

ಕೋರ್ಟ್‌ನಲ್ಲೇ ಕೊಲೆ

09:40 AM Apr 25, 2018 | Team Udayavani |

ಒಡಿಶಾ: ಪಾಪಿ ಪತಿಯೊಬ್ಬ ನ್ಯಾಯಾಲಯದಲ್ಲೇ ಪತ್ನಿಯನ್ನು ಚಾಕುವಿನಿಂದ ಇರಿದು ಹತ್ಯೆಗೈದ ಘಟನೆ ನಡೆದಿದೆ. ಸಂಬಲ್‌ ಪುರ್‌ ನಿವಾಸಿ ರಮೇಶ್‌ ಕುಂಬಾರ್‌, ಪತ್ನಿ ಸಂಜಿತಾ ಚೌಧರಿಯನ್ನು (18) ಹತ್ಯೆ ಮಾಡಿದಾತ. ಘಟನೆಯಲ್ಲಿ ಅತ್ತೆ ಲಲಿತಾ ಚೌಧರಿ, ಎರಡೂವರೆ ವರ್ಷದ ಸೋದರ ಸೊಸೆ ಗಾಯಗೊಂಡಿದ್ದಾರೆ. ಪತಿಯ ಚಿತ್ರಹಿಂಸೆ ತಾಳಲಾಗದೇ ಸಂಜಿತಾ ತವರಿಗೆ ವಾಪಸ್ಸಾಗಿದ್ದರು.ತನಗೆ ಪತ್ನಿ ಬೇಕು ಎಂದು ರಮೇಶ್‌ ಇಲ್ಲಿನ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆಗೆ ಬಂದಿದ್ದ ಸಂಜಿತಾರನ್ನು ರಮೇಶ್‌ ಕೋರ್ಟ್‌ನಲ್ಲೇ ಅಟ್ಟಾಡಿಸಿಕೊಂಡು ಹೋಗಿ, ಕೊಲೆ ಮಾಡಿದ್ದಾನೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next