Advertisement

ಅದು ಬಾಂಬ್‌ ಅಲ್ಲ, ಬಾಂ

11:23 AM Jan 03, 2018 | |

ಮುಂಬಯಿ: “ಪದ ಪ್ರಯೋಗ’ವನ್ನು ಅರ್ಥೈಸಿ ಕೊಳ್ಳುವಲ್ಲಿ ಆದ ಎಡವಟ್ಟು ಇದೀಗ ಅಮೆರಿಕದ ಕಂಪೆನಿಯೊಂದರ ಸಿಇಒವೊಬ್ಬರು ಹುಸಿ ಬಾಂಬ್‌ ಕರೆ ಪ್ರಕರಣದಲ್ಲಿ ಬಂಧನಕ್ಕೊಳಗಾಗುವಂತೆ ಮಾಡಿದೆ. ಮುಂಬಯಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್‌ ಬೆದರಿಕೆ ಹಾಕಿ ಗಲಿಬಿಲಿ ಸೃಷ್ಟಿಸಿದ್ದ ಆರೋಪದಲ್ಲಿ ಮಂಗಳವಾರ ಅಮೆರಿಕ ಮೂಲದ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನೋದ್‌ ಮೂರ್ಜಾನಿ (45) ಎಂಬವರನ್ನು  ಪೊಲೀಸರು ಬಂಧಿಸಿದ್ದಾರೆ. ಆದರೆ, ಅವರು ನಿಜವಾಗಿ ಬೆದರಿಕೆ ಹಾಕಿದ್ದಲ್ಲ, ಬದಲಿಗೆ ಅವರು ಬಳಸಿದ ಪದವನ್ನು ಕರೆ ಸ್ವೀಕರಿಸಿದಾಕೆ ಅರ್ಥಮಾಡಿ ಕೊಂಡಿದ್ದರಲ್ಲಿ ತಪ್ಪಾಗಿದೆ ಎಂದು ಪೊಲೀಸರು ಅನಂತರ ತಿಳಿಸಿದ್ದಾರೆ. 

Advertisement

ವಿನೋದ್‌ ಅವರು ಮುಂಬಯಿನಿಂದ ದೆಹಲಿಗೆ ವಿಮಾನದಲ್ಲಿ ಪ್ರಯಾಣಿಸಬೇಕಿತ್ತು. ಆದರೆ, ದಟ್ಟ ಮಂಜಿನ ಕಾರಣಕ್ಕೆ ವಿಮಾನಗಳ ಸಂಚಾರ ವಿಳಂಬವಾಗಿತ್ತು. ಹೀಗಾಗಿ ಅವರು ನಿಲ್ದಾಣದ ಟೋಲ್‌ ಫ್ರೀ ಸಂಖ್ಯೆಗೆ ಕರೆ ಮಾಡಿ, “ಬಾಂ-ಡೆಲ್‌’ ವಿಮಾನದ ಸಂಚಾರದ ಬಗ್ಗೆ ವಿವರಣೆ ಕೇಳಿದ್ದರು. ಬಾಂಬೆ- ಡೆಲ್ಲಿ ಎನ್ನುವುದನ್ನು ಅವರು ಸಂಕ್ಷಿಪ್ತವಾಗಿ “ಬಾಂ-ಡೆಲ್‌’ ಎಂದಿದ್ದರು. ಆದರೆ, ಅತ್ತ ಕಡೆ ಕರೆ ಸ್ವೀಕರಿಸಿದ ಸಿಬಂದಿಗೆ ಅದು “ಬಾಂಬ್‌ ಹೇ’ (“ಬಾಂಬ್‌ ಇದೆ’ ಎಂದರ್ಥ) ಎಂದು ಕೇಳಿಸಿತ್ತು. ಕೂಡಲೇ ಸಿಬಂದಿಯು ಈ ವಿಚಾರವನ್ನು ಅಧಿಕಾರಿಗಳಿಗೆ ತಿಳಿಸಿದ್ದು, ಸಿಸಿಟಿವಿ ಕ್ಯಾಮೆರಾದ ಮಾಹಿತಿ ಪಡೆದು, ಕರೆ ಮಾಡಿದ್ದ ವಿನೋದ್‌ರನ್ನು ಬಂಧಿಸಲಾಯಿತು. ಹುಸಿ ಬಾಂಬ್‌ ಕರೆ ಆರೋಪವನ್ನೂ ಹೊರಿಸಲಾಯಿತು. ಆದರೆ, ವಿಚಾರಣೆ ನಡೆಸಿದ ಬಳಿಕ ಅವರು ಹೇಳಿದ್ದೇ ಬೇರೆ, ಇವರಿಗೆ ಕೇಳಿಸಿದ್ದೇ ಬೇರೆ ಎಂಬ ವಿಚಾರ ಗೊತ್ತಾಯಿತು.

Advertisement

Udayavani is now on Telegram. Click here to join our channel and stay updated with the latest news.

Next