Advertisement

ಮದುವೆಗಾಗಿ ಇಡೀ ವಿಮಾನ ಬುಕ್‌!

11:09 PM Feb 12, 2023 | Team Udayavani |

ಕಠ್ಮಂಡು :ಇತ್ತೀಚಿನ ವರ್ಷಗಳಲ್ಲಿ ಮದುವೆ ಬರೀ ವಧು-ವರರಿಗೆ ಮಾತ್ರವಲ್ಲ, ಅತಿಥಿಗಳಿಗೂ ನೆನಪಿನಲ್ಲಿ ಉಳಿಯುವಂತೆ ಸಂಭ್ರಮಾಚರಣೆ ಮಾಡಲಾಗುತ್ತಿದೆ. ಅದಕ್ಕೆ ನಿದರ್ಶವೆನ್ನುವಂತೆ ಇಲ್ಲೊಬ್ಬ ಯುವಕ, ತನ್ನ ಮದುವೆಗೆ ಕುಟುಂಬವನ್ನು ಕರೆದೊಯ್ಯಲು ಇಡೀ ವಿಮಾನವನ್ನೇ ಬುಕ್‌ ಮಾಡಿದ್ದು, ಈ ವಿಡಿಯೋ ವೈರಲ್‌ ಆಗಿದೆ.

Advertisement

ಭುವನ್‌ ಎನ್ನುವ ಯುವಕ ನೇಪಾಳದ ಕಠ್ಮಂಡುವಿನಲ್ಲಿ ಮದುವೆಯಾಗಿದ್ದು, ಸಮಾರಂಭಕ್ಕೆ ತನ್ನ ಇಡೀ ಕುಟುಂಬವನ್ನು ಕರೆದೊಯ್ದಿದ್ದಾನೆ. ಅದಕ್ಕಾಗಿ ವಿಮಾನವನ್ನು ಬುಕ್‌ ಮಾಡಿದ್ದಾನೆ.

ಸಂಬಂಧಿಕರು ಖುಷಿಯಾಗಿ, ಆತನ ಮದುವೆಗೆ ಶುಭಹಾರೈಸಿ, ನಕ್ಕು-ನಲಿಯುವ ವಿಡಿಯೋವನ್ನು ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. 17 ಲಕ್ಷಕ್ಕೂ ಅಧಿಕ ಮಂದಿ ವಿಡಿಯೋ ವೀಕ್ಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next