Advertisement

ಬಾಲಕಿಯರಿಬ್ಬರ ಮೇಲೆ ಅತ್ಯಾಚಾರಕ್ಕೆ ಯತ್ನ: ಕಾಮುಕ ಸೆರೆ

12:21 PM Jan 10, 2018 | udayavani editorial |

ಮುಜಫ‌ರನಗರ : ಇಬ್ಬರು ಬಾಲಕಿಯರನ್ನು ತನ್ನ ಮನೆಗೆ ಬರುವಂತೆ ಆಸೆ ತೋರಿಸಿ ಅವರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ 27ರ ಹರೆಯದ ಕಾಮುಕ ತರುಣನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಕಾಮಾಂಧ ತರುಣನು 7 – 8 ವರ್ಷ ಪ್ರಾಯದ ಬಾಲಕಿಯರಿಬ್ಬರನ್ನು ತನ್ನ ಮನೆಗೆ ಕರೆದೊಯ್ದು ಅವರ ಮೇಲೆ ಅತ್ಯಾಚಾರಕ್ಕೆ  ಯತ್ನಿಸಿದಾಗ ಬಾಲಕಿಯರು ಬೊಬ್ಬಿಟ್ಟರು.

ಮಕ್ಕಳ ಆಕ್ರಂದನ ಕೇಳಿಸಿಕೊಂಡ ನೆರೆಹೊರೆಯುವರು ತತ್‌ಕ್ಷಣ ಕಾಮುಕ ಯುವಕನ ಮನೆಗೆ ನುಗ್ಗಿ ಬಾಲಕಿಯರಿಬ್ಬರನ್ನು ಪಾರುಗೊಳಿಸಿ ಆತನಿಗೆ ಚೆನ್ನಾಗಿ ಧರ್ಮದೇಟು ನೀಡಿ ಬಳಿಕ ಪೊಲೀಸರಿಗೆ ಒಪ್ಪಿಸಿದರು ಎಂದು ಕಂದ್ಲಾ ಪೊಲೀಸ್‌ ಠಾಣೆಯ ಎಸ್‌ಎಚ್‌ಓ ಒ ಪಿ ಚೌಧರಿ ತಿಳಿಸಿದ್ದಾರೆ. 

ಪೊಲೀಸರು ಆರೋಪಿ ಕಾಮುಕ ತರುಣನ ವಿರುದ್ಧ ಐಪಿಸಿ ಹಾಗೂ ಪೋಕ್‌ಸೋ ಕಾಯಿದೆಯ ಸೆಕ್ಷನ್‌ಗಳ ಪ್ರಕಾರ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next