ಮುಂಬೈ : ಬಾಲಿವುಡ್ ಕಿಂಗ್ ನಟ ಶಾರುಖ್ ಖಾನ್ ಪ್ರೀತಿಯ ಪುತ್ರಿ ಸುಹಾನಾ ಖಾನ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡುವ ಮುನ್ನವೆ ಸೆಲೆಬ್ರಿಟಿಯಂತಾಗಿದ್ದಾರೆ. ಅದು ಎಷ್ಟರ ಮಟ್ಟಿಗೆಯಂದರೆ ಸೋಷಿಯಲ್ ಮೀಡಿಯಾದಲ್ಲಿ ಈ ಬೆಡಗಿಗೆ ಸಿಕ್ಕಾಪಟ್ಟೆ ಫ್ಯಾನ್ ಫಾಲೋವರ್ಸ್ ಹೊಂದಿದ್ದಾರೆ.
ಸುಹಾನಾ ಸದ್ಯ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾರೆ. ಸ್ಟಡಿ ಮುಗಿದ ಮೇಲೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಡಲು ಅವರು ರೆಡಿಯಾಗಿದ್ದಾರೆ. ಈ ಹುಡುಗಿ ಬಗ್ಗೆ ಇಷ್ಟೆಲ್ಲಾ ಪೀಠಿಕೆ ಯಾಕೆ ಹಾಕುತ್ತಿದ್ದೇವೆ ಅಂತಾ ನಿಮ್ಮಲ್ಲಿ ಪ್ರಶ್ನೆ ಕಾಡುತ್ತಿರಬಹುದು. ಅದಕ್ಕೊಂದು ಬಲವಾದ ಕಾರಣ ಇದೆ.
ಹೌದು, ಸುಹಾನಾ ಇತ್ತೀಚಿಗೆ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡರು. ಮಗಳ ಜನ್ಮ ದಿನಕ್ಕೆ ಗೌರಿ ಖಾನ್ ಪ್ರೀತಿಯಿಂದ ವಿಶ್ ಮಾಡಿದ್ದರು. ಇವರ ಶುಭಾಶಯದ ಪೋಸ್ಟ್ ಗೆ ಸಾಕಷ್ಟು ಕಾಮೆಂಟ್ ಗಳು ಹರಿದು ಬಂದವು. ಅವುಗಳಲ್ಲೊಂದು ಈಗ ಸೋಷಿಯಲ್ ಮೀಡಿಯದಲ್ಲಿ ಸಖತ್ ಸಂಚಲನ ಮೂಡಿಸುತ್ತಿದೆ. ಅಷ್ಟಕ್ಕೂ ಆ ಕಾಮೆಂಟ್ ಏನು ಗೊತ್ತಾ ?
ನಿಮ್ಮ ಮಗಳನ್ನು ಮದುವೆ ಮಾಡಿ ಕೊಡಿ :
ಗೌರಿ ಖಾನ್ ಟ್ವಿಟ್ಟರ್ ಪೋಸ್ಟ್ ಗೆ ಕಾಮೆಂಟ್ ಮಾಡಿರುವ ಸೊಹೇಬ್ ಹೆಸರಿನ ಯುವಕನೋರ್ವ ನೆರವಾಗಿ ಮದುವೆ ಬಗ್ಗೆ ಪ್ರಸ್ತಾಪ ಮಾಡಿದ್ದಾನೆ. ನನಗೆ ತಿಂಗಳಿಗೆ ಒಂದು ಲಕ್ಷ ರೂಪಾಯಿ ಸಂಬಳ ಇದೆ. ನಿಮ್ಮ ಮಗಳನ್ನು ನನ್ನ ಜೊತೆ ಮದುವೆ ಮಾಡಿ ಕೊಡುತ್ತೀರಾ ಎಂದು ಕೇಳಿದ್ದಾನೆ. ಈತನ ಕಾಮೆಂಟ್ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಆತನ ಧೈರ್ಯ ನೋಡಿ ಕೆಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.