Advertisement

ಗೋವಾದಲ್ಲಿ ಕಳ್ಳತನ : ಕರ್ನಾಟಕ ಮೂಲದ ವ್ಯಕ್ತಿ ಬಂಧನ

05:21 PM Jun 06, 2021 | Team Udayavani |

ಪಣಜಿ: ಗೋವಾದ ಅಂಜುನಾದಲ್ಲಿರುವ ಇರಾನಿ ಪ್ರಜೆಯೊಬ್ಬರ ಮನೆಗೆ ನುಗ್ಗಿ ಕಳ್ಳತನ ನಡೆಸಿದ್ದ ಆರೋಪದಡಿಯಲ್ಲಿ ಕರ್ನಾಟಕ ಮೂಲದ ಸತ್ಯಪ್ಪ ಯಲ್ಲಪ್ಪಾ ಗೋವಿ (20) ಎಂಬ ಆರೋಪಿಯನ್ನು ಅಂಜುನಾ ಪೋಲಿಸರು ಬಂಧಿಸಿದ್ದಾರೆ.

Advertisement

ಬಂಧಿತ ಆರೋಪಿಯು ಇರಾನಿ ಪ್ರಜೆಯೊಬ್ಬರ ಮನೆಯ ಹಿಂಬಾಗಿಲಿಂದ ನುಗ್ಗಿ  ಆಪಲ್ ಕಂಪನಿಯ ಲ್ಯಾಪ್ಟಾಪ್, ನೋಕಿಯಾ ಮೊಬೈಲ್ ಮತ್ತು  12000 ರೂ ಹಣ ದೋಚಿ ಪರಾರಿಯಾಗಿದ್ದ ಎನ್ನಲಾಗಿದೆ.

ಪೋಲಿಸರು ಬಂಧಿತ ಆರೋಪಿ ವಾಸವಿದ್ದ ಬಾಡಿಗೆ ಮನೆಯಿಂದ ಕಳುವಾಗಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಪಿಎಸ್‍ಐ ಅಕ್ಷಯ ಪಾರ್ಸೇಕರ್ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next