Advertisement

ಹಣ ಕದ್ದು ವಂಚಿಸಿದ ಆರೋಪಿ ಕೊಲೆ ಅಪರಾಧಿ ಎಂದು ಬಯಲಾಯಿತು

12:17 PM Jan 03, 2018 | udayavani editorial |

ಥಾಣೆ : ಬ್ಯಾಂಕ್‌ ಗ್ರಾಹಕರಿಗೆ ನೆರವಾಗುವ ನೆಪದಲ್ಲಿ ಅವರ ಬಳಿ ಇದ್ದ ಹಣ ಕದ್ದು ವಂಚಿಸಿದ ಆರೋಪದಲ್ಲಿ ಇತರಿಬ್ಬರೊಂದಿಗೆ ಬಂಧಿಸಲ್ಪಟ್ಟ 28ರ ಹರೆಯದ ಕಳ್ಳನೋರ್ವ ತನಿಖೆಯ ವೇಳೆ ಗುಜರಾತ್‌ನಿಂದ ಪರಾರಿಯಾಗಿರುವ ಕೊಲೆ ಅಪರಾಧಿಎಂದು ಗೊತ್ತಾಯಿತು ಎಂಬುದಾಗಿ ಮಹಾರಾಷ್ಟ್ರದ ಪಾಲಗಢ ಪೊಲೀಸರು ತಿಳಿಸಿದ್ದಾರೆ.

Advertisement

ಮಿತೇಶ್‌ ಅಲಿಯಾಸ್‌ ರಾಹುಲ್‌ ಅಲಿಯಾಸ್‌ ಖಾತಿಯಾವಾಡಿ ವಾಮನ ರಾಠೊಡ್‌ ಎಂಬಾತನು ಮೂಲತಃ ಭಾವನಗರದವ. ಆತನನ್ನು 2009ರಲ್ಲಿ ಕೊಲೆ ಕೃತ್ಯಕ್ಕೆ ಸಂಬಂಧಿಸಿ ಜೈಲಿಗೆ ಹಾಕಲಾಗಿತ್ತು ಎಂದು ಪಾಲಗಢ ಹೆಚ್ಚುವರಿ ಪೊಲೀಸ್‌ ಸುಪರಿಂಟೆಂಡೆಂಟ್‌ ರಾಜ್‌ ತಿಲಕ್‌ ರೋಶನ್‌ ತಿಳಿಸಿದ್ದಾರೆ.

2,000 ಮತ್ತು 500 ರೂ. ನೋಟುಗಳನ್ನು ಖಾತೆಗೆ ಜಮೆ ಮಾಡುವ ಮುನ್ನ ಅವುಗಳ  ಸೀರಿಯಲ್‌ ನಂಬರ್‌ ಬರೆದುಕೊಡಲು ನೆರವಾಗುವ ನೆಪದಲ್ಲಿ ಕೆಲ ಅಪರಿಚಿತ ವ್ಯಕ್ತಿಗಳು ಗ್ರಾಹಕರನ್ನು ವಂಚಿಸಿದ್ದರೆಂಬ ಬಗ್ಗೆ ಪಾಲಗಢ ಪೊಲೀಸರು ತನಿಖೆ ನಡೆಸುತ್ತಿದ್ದಾಗ ಕೊಲೆ ಅಪರಾಧಿ ಮಿತೇಶ್‌ ಅಲಿಯಾಸ್‌ ರಾಹುಲ್‌ ಅಲಿಯಾಸ್‌ ಖಾತಿಯಾವಾಡಿ ವಾಮನ ರಾಠೊಡ್‌ ಸಿಕ್ಕಿಬಿದಿದ್ದ.

ಈತನೊಂದಿಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ಇನ್ನಿಬ್ಬರೆಂದರೆ ಚಂದ್ರಕಾಂತ ದಾಸವತೆ 28, ಮತ್ತು ವಿಷ್ಣುದತ್‌ ಅಲಿಯಾಸ್‌ ಸಂಜಯ್‌ ಶುಕ್ಲಾ 27. 

Advertisement

Udayavani is now on Telegram. Click here to join our channel and stay updated with the latest news.

Next