Advertisement

ಬೆಳಗಾವಿ: ಜ್ಯುವೆಲ್ಲರಿಯಲ್ಲಿ ಪಿಸ್ತೂಲು ತೋರಿಸಿ ಚಿನ್ನ ದೋಚಿದ್ದ ವ್ಯಕ್ತಿ ಬಂಧನ

05:41 PM Jun 29, 2020 | keerthan |

ಬೆಳಗಾವಿ: ಚಿನ್ನ ಖರೀದಿ ನೆಪದಲ್ಲಿ ಬಂದು ಪಿಸ್ತೂಲು ತೋರಿಸಿ ಹೆದರಿಸಿ ಮೂರು ಲಕ್ಷ ರೂ. ಮೌಲ್ಯದ ಆಭರಣಗಳನ್ನು ದೋಚಿಕೊಂಡು ಹೋಗಿದ್ದ ವ್ಯಕ್ತಿಯನ್ನು ಕ್ಯಾಂಪ್ ಠಾಣೆ ಪೊಲೀಸರು ಬಂಧಿಸಿ ಮೂರು ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಪಿಸ್ತೂಲು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ಮಜಗಾಂವಿಯ ಸಂತ ಜ್ಞಾನೇಶ್ವರ ನಗರದ ವೈಭವ ರಾಜೇಂದ್ರ ಪಾಟೀಲ (29) ಎಂಬಾತನನ್ನು ಬಂಧಿಸಲಾಗಿದೆ. ಮೂರು ಲಕ್ಷ ರೂ. ಮೌಲ್ಯದ ಬಂಗಾರದ ನಾಲ್ಕು ನಕ್ಲೇಸ್, ಕೃತ್ಯಕ್ಕೆ ಬಳಸಿದ್ದ ಕಂಟ್ರಿ ಪಿಸ್ತೂಲು, ಮೂರು ಜೀವಂತ ಗುಂಡು, ದ್ವಿಚಕ್ರ ವಾಹನ ವಶಪಡಿಸಿಕೊಂಡು ಈತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಜೂನ್ 27ರಂದು ಸಂಜೆ 6.30ಕ್ಕೆ ಬಂದ ವೈಭವ ಪಾಟಿಲ ಎಂಬ ವ್ಯಕ್ತಿ ಹಿಂಡಲಗಾ ರಸ್ತೆಯ ವಿಜಯ ನಗರದಲ್ಲಿರುವ ಸಮೃದ್ಧಿ ಜ್ಯುವೆರ‍್ಸ್ಗೆ ಚಿನ್ನ ಖರೀದಿಗೆ ಬಂದಿದ್ದಾನೆ. ಮಾಲೀಕ ಸಚಿನ್ ನಾರಾಯಣ ಬಾಂದಿವಾಡೆಕರ ಅವರಿಗೆ ಬಂಗಾರದ ನೆಕ್ಲೆಸ್‌ಗಳನ್ನು ತೋರಿಸುವಂತೆ ಹೇಳಿ ಅದನ್ನು ಪಡೆದು ಕೊಂಡವನೇ ತನ್ನ ಜೇಬಿನಲ್ಲಿ ಇಟ್ಟುಕೊಂಡಿದ್ದಾನೆ. ನಂತರ ಪಿಸ್ತೂಲು ತೋರಿಸಿ ಬೈಕ್ ಹತ್ತಿ ಓಡಿ ಹೋಗಿದ್ದನು. ಈ ಬಗ್ಗೆ ಸಚಿನ್ ಅವರು ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಖಡೇಬಜಾರ್ ಎಸಿಪಿ ಎ. ಚಂದ್ರಪ್ಪ ಮಾರ್ಗದರ್ಶನದಲ್ಲಿ ಕ್ಯಾಂಪ್ ಇನ್ಸಪೆಕ್ಟರ್ ಡಿ. ಸಂತೋಷಕುಮಾರ ಹಾಗೂ ಎಎಸ್‌ಐಗಳಾದ ಬಿ.ಆರ್. ಡೂಗ್, ಎಸ್.ಎಂ. ಬಾಂಗಿ, ಎಂ.ವೈ. ಹುಕ್ಕೇರಿ, ಸಿಬ್ಬಂದಿಗಳಾದ ಬಿ.ಬಿ. ಗೌಡರ, ಎಂ.ಎ. ಪಾಟೀಲ, ಬಿ.ಎಂ. ನರಗುಂದ, ಬಿ.ಎಸ್. ರುದ್ರಾಪುರ, ಎ.ಬಿ. ಘಟ್ಟದ, ಯು.ಎಂ. ಥೈಕಾರ, ಎಸ್.ಎಚ್. ತಳವಾರ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next