ಬಲ್ಲಿಯಾ, ಉತ್ತರ ಪ್ರದೇಶ : ಬಿಜೆಪಿ ವಿರುದ್ಧ ಸಾಮಾಜಿಕ ಜಾಲ ಮಾಧ್ಯಮದಲ್ಲಿ ಆಕ್ಷೇಪಾರ್ಹ ಟೀಕೆಗಳನ್ನು ಪೋಸ್ಟ್ ಮಾಡಿದ ಆರೋಪ ಮೇಲೆ ಪೊಲೀಸರು ಇಲ್ಲಿನ ರಸದಾ ಪ್ರದೇಶದ ಅರ್ಮಾನ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ.
Advertisement
ಬಿಜೆಪಿ ನಾಯಕ ಗೋಪಾಲ್‌ಜೀ ಸೋನಿ ಅವರು ಅರ್ಮಾನ್ ವಿರುದ್ಧ ದೂರು ನೀಡಿದ್ದರು. ಫೇಸ್ ಬುಕ್ ನಲ್ಲಿ ಅರ್ಮಾನ್ ಬಿಜೆಪಿ ವಿರುದ್ದ ಅವಮಾನಕಾರಿ ಪೋಸ್ಟ್‌ಗಳನ್ನು ಹಾಕಿರುವುದಾಗಿ ದೂರಿನಲ್ಲಿ ಹೇಳಿದ್ದರು.
ಆರೋಪಿ ಅರ್ಮಾನನ್ನು ಬಂಧಿಸಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಸಹಾಯಕ ಪೊಲೀಸ್ ಸುಪರಿಂಟೆಂಡೆಂಟ್ ವಿಕ್ರಾಂತ್ ವೀರ್ ತಿಳಿಸಿದ್ದಾರೆ.