Advertisement

ಏರ್‌ ವಿಸ್ತಾರಾ ಚಾಲಕ ಸಿಬಂದಿಗೆ ಲೈಂಗಿಕ ಕಿರುಕುಳ, ಆರೋಪಿ ಅರೆಸ್ಟ್‌

11:09 AM Mar 28, 2018 | udayavani editorial |

ಹೊಸದಿಲ್ಲಿ : ಏರ್‌ ವಿಸ್ತಾರಾ ಚಾಲಕ ಸಿಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಇಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. 

Advertisement

ಇಂದಿರಾ ಗಾಂಧಿ ವಿಮಾನ ನಿಲ್ದಾಣದ ಟರ್ಮಿನಲ್‌ 3 ರಲ್ಲಿ  ಪ್ರಯಾಣಿಕರು ವಿಮಾನದಿಂದ ಇಳಿಯುತ್ತಿದ್ದಂತೆಯೇ ಈ ಘಟನೆ ನಡೆದಿರುವುದಾಗಿ ಮಾಧ್ಯಮ ವರದಿ ತಿಳಿಸಿದೆ.

ಈ ಸಂಬಂಧ ಏರ್‌ ವಿಸ್ತಾರಾ ಹೊರಡಿಸಿರುವ ಪ್ರಕಟನೆ ಹೀಗೆ ಹೇಳಿದೆ : “ಲಕ್ನೋ – ದಿಲ್ಲಿ ಹಾರಾಟದ ವಿಮಾನ ಸಿಬಂದಿಗೆ ಮಾರ್ಚ್‌ 24ರಂದು ಪ್ರಯಾಣಿಕನೋರ್ವ ಲೈಂಗಿಕ ಕಿರುಕುಳ ನೀಡಿರುವ ಘಟನೆ ವರದಿಯಾಗಿದೆ. ವಿಸ್ತಾರಾ ಏರ್‌ ಸಂಸ್ಥೆಯು ತನ್ನ ಚಾಲಕ ಸಿಬಂದಿಗಳ ಮತ್ತು ತನ್ನ ಗ್ರಾಹಕರ ಸುರಕ್ಷೆ ಹಾಗೂ ಘನತೆ ಗೌರವಗಳಿಗೆ ಚ್ಯುತಿ ಬರುವ ರೀತಿಯಲ್ಲಿ ಪ್ರಯಾಣಿಕರು ತೋರುವ ಯಾವುದೇ ದುರ್ವರ್ತನೆಯನ್ನು ಸಹಿಸುವುದಿಲ್ಲ’. 

ಕೆಲ ತಿಂಗಳ ಹಿಂದಷ್ಟೇ ಬಾಲಿವುಡ್‌ ನಟಿಗೆ ಏರ್‌ ವಿಸ್ತಾರಾ ವಿಮಾನದಲ್ಲಿ ಲೈಂಗಿಕ ಕಿರುಕುಳ ನೀಡಲಾದ ಘಟನೆ ನಡೆದಿತ್ತು. ದಿಲ್ಲಿ – ಮುಂಬಯಿ ಹಾರಾಟದ ವಿಮಾನದಲ್ಲಿ ಸಹ ಪ್ರಯಾಣಿಕನೋರ್ವ ತನಗೆ ಲೈಂಗಿಕ ಕಿರುಕುಳ ನೀಡಿದನೆಂದು ಆಕೆ ಆರೋಪಿಸಿದ್ದರು. ಮುಂಬಯಿ ಪೊಲೀಸರು ಆಕೆಯ ದೂರಿನ ಪ್ರಕಾರ ಕೇಸು ದಾಖಲಿಸಿಕೊಂಡು ತನಿಖೆ ನಡೆಸಿದ್ದರು. 

ಏರ್‌ ವಿಸ್ತಾರಾ ಸಂಸ್ಥೆ ಆ ಸಂತ್ರಸ್ತ ನಟಿಯಲ್ಲಿ ಕ್ಷಮೆಯಾಚಿಸಿತ್ತು ಮಾತ್ರವಲ್ಲದೆ ಘಟನೆಯ ಬಗ್ಗೆ ತಾನು ತನಿಖೆ ನಡೆಸುವುದಾಗಿಯೂ, ಪ್ರಯಾಣಿಕರ ಈ ರೀತಿಯ ದುರ್ವರ್ತನೆಯನ್ನು ತಾನು ಎಷ್ಟು ಮಾತ್ರಕ್ಕೂ ಸಹಿಸೆನೆಂದು ಹೇಳಿತ್ತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next