Advertisement

1985ರ Air India ಬಾಂಬ್ ಸ್ಫೋಟ ಪ್ರಕರಣದಲ್ಲಿ ಖುಲಾಸೆಗೊಂಡಿದ್ದ ಮಲಿಕ್ ಗುಂಡಿನ ದಾಳಿಗೆ ಸಾವು

12:37 PM Jul 15, 2022 | Team Udayavani |

ಕೆನಡಾ: 1985ರ ಏರ್ ಇಂಡಿಯಾ ಬಾಂಬ್ ಸ್ಫೋಟ ಪ್ರಕರಣದಲ್ಲಿ ಖುಲಾಸೆಗೊಂಡಿದ್ದ ಕೆನಡಾ ಮೂಲದ ಸಿಖ್ ನಾಯಕ, ಉದ್ಯಮಿ ರಿಪುದಮನ್ ಸಿಂಗ್ ಮಲಿಕ್(70ವರ್ಷ) ಅವರನ್ನು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ನಡೆದಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Advertisement

ಇದನ್ನೂ ಓದಿ:ಹೌದ್ದೋ ಹುಲಿಯಾ… ಮತ್ತೆ ನೀನಾ ಸಿ.ಎಂ: ಸಿದ್ದರಾಮಯ್ಯ ಪರ ಅಭಿಮಾನಿಗಳಿಂದ ಘೋಷಣೆ

ಗ್ಲೋಬಲ್ ನ್ಯೂಸ್ ವರದಿ ಪ್ರಕಾರ,  ಗುರುವಾರ ಬೆಳಗ್ಗೆ 9.30ರ ಸಮಯದಲ್ಲಿ ಸುರ್ರೆ ಬಿ.ಸಿ. ಪ್ರದೇಶದಲ್ಲಿ ಗುಂಡಿನ ದಾಳಿ ನಡೆದ ಘಟನೆ ಕುರಿತು ಪೊಲೀಸ್ ಠಾಣೆಗೆ ದೂರವಾಣಿ ಕರೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿದಾಗ, ವ್ಯಕ್ತಿಯೊಬ್ಬರು ಗುಂಡಿನ ದಾಳಿಯಿಂದ ನೆಲದ ಮೇಲೆ ಬಿದ್ದಿರುವುದು ಪತ್ತೆಯಾಗಿತ್ತು.

ಗುಂಡಿನ ದಾಳಿಯಿಂದ ಗಾಯಗೊಂಡಿದ್ದ ಮಲಿಕ್ ಅವರಿಗೆ ಅಧಿಕಾರಿಗಳು ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಲಿಕ್ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.

ಘಟನೆ ಕುರಿತು ಪೊಲೀಸರು ಮಲಿಕ್ ಹೆಸರನ್ನು ಬಹಿರಂಗಗೊಳಿಸಿಲ್ಲ. ಆದರೆ ಕುಟುಂಬದ ಮೂಲಗಳು ಅವರ ಗುರುತನ್ನು ಖಚಿತಪಡಿಸಿರುವುದಾಗಿ ವರದಿ ವಿವರಿಸಿದೆ.

Advertisement

1895ರಲ್ಲಿ ಏನಾಗಿತ್ತು?

1985ರಲ್ಲಿ ಏರ್ ಇಂಡಿಯಾ ವಿಮಾನ ಸ್ಫೋಟಗೊಂಡ ಪರಿಣಾಮ 329 ಜನರು ದಾರುಣವಾಗಿ ಸಾವನ್ನಪ್ಪಿದ್ದರು. ಇದು ಕೆನಡಾದ ಇತಿಹಾಸದಲ್ಲಿಏ ನಡೆದ ಅತೀ ದೊಡ್ಡ ಭಯೋತ್ಪಾದಕ ದಾಳಿಯಾಗಿತ್ತು. ಘಟನೆಯಲ್ಲಿ 280 ಕೆನಡಾ ಪ್ರಜೆಗಳು, 86 ಮಕ್ಕಳು ನಿಧನರಾಗಿದ್ದರು. ಪಂಜಾಬ್ ನ ಅಮೃತ್ ಸರದ ಗೋಲ್ಡನ್ ಟೆಂಪಲ್ ನೊಳಗೆ ಬ್ಲೂಸ್ಟಾರ್ ಆಪರೇಶನ್ ನಡೆಸಿದ್ದಕ್ಕೆ ಪ್ರತೀಕಾರವಾಗಿ ಬ್ರಿಟಿಷ್ ಕೊಲಂಬಿಯಾದಲ್ಲಿನ ತೀವ್ರಗಾಮಿ ಸಿಖ್ ಉಗ್ರರು ಏರ್ ಇಂಡಿಯಾ ಬಾಂಬ್ ಸ್ಫೋಟದ ರೂವಾರಿಗಳೆಂದು ವಾದಿಸಲಾಗಿತ್ತು.

ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ಮಲಿಕ್ ಮತ್ತು ಅಜೈಬ್ ಸಿಂಗ್ ಬಾಗ್ರಿಯನ್ನು 2005ರಲ್ಲಿ ಸಾಕ್ಷ್ಯಾಧಾರದ ಕೊರತೆಯ ಹಿನ್ನೆಲೆಯಲ್ಲಿ ಕೋರ್ಟ್ ಖುಲಾಸೆಗೊಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next