Advertisement

Mammootty: ಮಲಯಾಳಂ ನಟ ಮಮ್ಮುಟ್ಟಿ ಅವರಿಗೆ ಮಾತೃವಿಯೋಗ

10:58 AM Apr 21, 2023 | Team Udayavani |

ಕೊಚ್ಚಿ: ಮಲಯಾಳಂನ ಖ್ಯಾತ ನಟ ಮಮ್ಮುಟ್ಟಿ ಅವರ ತಾಯಿ ಫಾತಿಮಾ ಇಸ್ಮಾಯಿಲ್ (93) ಶುಕ್ರವಾರ (ಏಪ್ರಿಲ್ 21 ರಂದು) ನಿಧನರಾದರು. ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಅವರು ಶುಕ್ರವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ.

Advertisement

ಭಾರತ ಸಿನಿಮಾರಂಗದ ಖ್ಯಾತ ನಟರಾಗಿರುವ ಮಮ್ಮುಟ್ಟಿ ಅವರ ತಾಯಿ ಕಳೆದ ಕೆಲ ಸಮಯದಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ವರದಿಯ ಪ್ರಕಾರ ಶುಕ್ರವಾರ ಸಂಜೆ ಕೊಟ್ಟಾಯಂನ ಚೆಂಪುವಿನ ಅವರ ಹುಟ್ಟೂರಲ್ಲಿ ದಫನ ಕಾರ್ಯ ನಡೆಯಲಿದೆ.

ಇದನ್ನೂ ಓದಿ: 2nd PUC ಫಲಿತಾಂಶ ಪ್ರಕಟ: ಶೇ 74.64 ವಿದ್ಯಾರ್ಥಿಗಳು ಉತ್ತೀರ್ಣ, ದ. ಕನ್ನಡ ಪ್ರಥಮ

ಫಾತಿಮಾ ಇಸ್ಮಾಯಿಲ್ ಅವರಿಗೆ ಮಮ್ಮುಟ್ಟಿ,ಇಬ್ರಾಹಿಂ ಕುಟ್ಟಿ , ಶಫೀನಾ, ಅಮೀನಾ, ಸೌದಾ ಮತ್ತು ಜಕರಿಯಾ ಎನ್ನುವ ಮಕ್ಕಳಿದ್ದಾರೆ. ಮಮ್ಮುಟ್ಟಿ ಹಿರಿಯ ಮಗನಾಗಿದ್ದಾರೆ.

ಮಮ್ಮುಟ್ಟಿ ಅವರ ತಾಯಿಯ ನಿಧನಕ್ಕೆ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಸೇರಿದಂತೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next