Advertisement

ವಿದ್ಯಾರ್ಥಿಗಳಗೆ 10 ಲಕ್ಷ ರೂ. ಮೌಲ್ಯದ ಕ್ರೆಡಿಟ್‌ ಕಾರ್ಡ್‌ : ಮಮತಾ ಬ್ಯಾನರ್ಜಿ

09:44 PM Jun 30, 2021 | Team Udayavani |

ಕೋಲ್ಕತ: ಈ ಬಾರಿ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ವೇಳೆ ನೀಡಲಾಗಿದ್ದ ಭರವಸೆಗಳನ್ನು ಈಡೇರಿಸುವ ದಿಕ್ಕಿನಲ್ಲಿ ಮಮತಾ ಬ್ಯಾನರ್ಜಿ ಹೆಜ್ಜೆಗಳನ್ನಿಟ್ಟಿದ್ದಾರೆ.

Advertisement

ಅವರು ವಿದ್ಯಾರ್ಥಿಗಳ ಶಿಕ್ಷಣೋದ್ದೇಶಕ್ಕಾಗಿ 10 ಲಕ್ಷ ರೂ.ವರೆಗೆ ಸಾಲ ನೀಡುವ ಕ್ರೆಡಿಟ್‌ ಕಾರ್ಡ್‌ಗಳನ್ನು ಬುಧವಾರ ಬಿಡುಗಡೆ ಮಾಡಿದ್ದಾರೆ.

ಇದರಿಂದ ಬಂಗಾಳದಲ್ಲಿ ನೆಲೆಸಿರುವ, ಅಲ್ಲಿನ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಾಗಿರುವ, ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತರಬೇತಿ ಕೇಂದ್ರಗಳಿಗೆ ಸೇರಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಹಾಗೆಯೇ ಇದಕ್ಕೆ ವಾರ್ಷಿಕವಾಗಿ ಕಡಿಮೆ ಬಡ್ಡಿದರವಿರಲಿದೆ. ಬಂಗಾಳದ ಚುನಾವಣೆಯಲ್ಲಿ ಮಮತಾ 10 ಪ್ರಮುಖ ಆಶ್ವಾಸನೆಗಳನ್ನು ನೀಡಿದ್ದರು. ಅದರಲ್ಲಿ ಒಂದನ್ನು ಪೂರೈಸಿದಂತಾಗಿದೆ.

ಇದನ್ನೂ ಓದಿ :ಶಶಿಕಲಾ ಏನೇ ಮಾಡಿದರೂ ಎಐಎಡಿಎಂಕೆ ಪಕ್ಷಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ : ಪಳನಿಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next