Advertisement

ತೃತೀಯ ರಂಗಕ್ಕಾಗಿ ಮಮತಾ ಮಾತು

06:00 AM Mar 28, 2018 | Karthik A |

ಹೊಸದಿಲ್ಲಿ: NDAಯಿಂದ ಟಿಡಿಪಿ ಹೊರಬರುತ್ತಿದ್ದಂತೆಯೇ ತೃತೀಯ ರಂಗ ಸ್ಥಾಪನೆ ಪ್ರಕ್ರಿಯೆ ಮತ್ತೂಮ್ಮೆ ಮಹತ್ವ ಪಡೆದಿದೆ. ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಅವರೇ ತೃತೀಯ ರಂಗ ಕಟ್ಟುವ ಕೆಲಸಕ್ಕೆ ಕೈಹಾಕಿದ್ದು, ಮಂಗಳವಾರ ಎನ್‌.ಸಿ.ಪಿ. ಮುಖ್ಯಸ್ಥ ಶರದ್‌ ಪವಾರ್‌, ಶಿವಸೇನೆಯ ಸಂಜಯ್‌ ರಾವತ್‌ರನ್ನು ಭೇಟಿ ಮಾಡಿದ್ದಾರೆ. 

Advertisement

ಭೇಟಿ ಅನಂತರದಲ್ಲಿ ಮಾತನಾಡಿದ ಮಮತಾ, ಚುನಾವಣೆಗಳಲ್ಲಿ ಬಿಜೆಪಿ ವಿಜಯವನ್ನು ಹತ್ತಿಕ್ಕಲು ವಿಪಕ್ಷಗಳು ಒಂದಾಗಬೇಕಿದೆ ಎಂದು ಆಗ್ರಹಿಸಿದ್ದಾರೆ. ಎಲ್ಲ ವಿಪಕ್ಷಗಳು ಒಟ್ಟಾಗಿ ಕೆಲಸ ಮಾಡಬೇಕು. ಬಿಜೆಪಿ ವಿರುದ್ಧ ಹೋರಾಡಲು ರಾಜ್ಯಗಳಲ್ಲಿ ಅತ್ಯಂತ ಬಲಿಷ್ಠ ವಿಪಕ್ಷವನ್ನು ನಾವು ಬೆಂಬಲಿಸಬೇಕು ಎಂದಿದ್ದಾರೆ.

ಬಿಜೆಪಿ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ದೇಶದೆಲ್ಲೆಡೆ ಬಿಜೆಪಿ ವಿರೋಧಿ ಅಲೆಯಿದೆ. ನಾನು ಎಲ್ಲ ರಾಜ್ಯಗಳಿಗೂ ಪ್ರವಾಸ ಮಾಡಿದ್ದೇನೆ. ಜನರ ಭಾವನೆ ನನಗೆ ತಿಳಿದಿದೆ. ನೋಟು ಅಪಮೌಲ್ಯ, ಜಿಎಸ್‌ಟಿ, ಬ್ಯಾಂಕ್‌ ಹಗರಣಗಳು ತಳಮಟ್ಟದ ಜನರನ್ನೂ ಬಾಧಿಸಿವೆ ಎಂದವರು ಹೇಳಿದ್ದಾರೆ. ಬಿಜೆಪಿಯ ಬಂಡಾಯ ಮುಖಂಡರಾದ ಶತ್ರುಘ್ನ ಸಿನ್ಹಾ, ಯಶವಂತ ಸಿನ್ಹಾ ಹಾಗೂ ಅರುಣ್‌ ಶೌರಿಯವರನ್ನೂ ಬುಧವಾರ ಭೇಟಿ ಮಾಡುವುದಾಗಿ ಮಮತಾ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next