Advertisement
ಕೇಂದ್ರದ ಪತ್ರ ಕೈಸೇರುತ್ತಿದ್ದಂತೆಯೇ ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿರುವ ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ, “ಕೇಂದ್ರದ ಸೂಚನೆ ಪಾಲಿಸಕೂಡದು’ ಎಂದು ರಾಜ್ಯದ ಶಾಲೆಗಳಿಗೆ ಆದೇಶಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ಸರ್ಕಾರದ ಈ ನಿಲುವು ಖಂಡಿಸಿರುವ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್, “ಇದೊಂದು ದುರದೃಷ್ಟಕರ ಬೆಳವಣಿಗೆ’ ಎಂದಿದ್ದಾರೆ. “ಪ್ರಧಾನಮಂತ್ರಿಗಳ ಆಶಯದ “ಸಂಕಲ್ಪ ಸಿದ್ಧಿ’ ಪ್ರಮಾಣ ಸ್ವೀಕಾರ ಅಥವಾ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಯುದ್ಧ, ಉಗ್ರರ ದಾಳಿ ಮತ್ತಿತರ ಸಂದರ್ಭಗಳಲ್ಲಿ ದೇಶಕ್ಕಾಗಿ ಪ್ರಾಣ ಬಲಿದಾನ ನೀಡಿದ ಹುತಾತ್ಮರನ್ನು ಸ್ಮರಿಸಿ ಎಂದು ಶಾಲೆಗಳ ಮೇಲೆ ಒತ್ತಡ ಹೇರಲಾಗುತ್ತಿಲ್ಲ. ಬದಲಿಗೆ “ಜಾತ್ಯತೀತ ನೆಲೆ’ಯಲ್ಲಿ ಈ ಸೂಚನೆ ನೀಡಲಾಗಿದೆ’ ಎಂದು ಜಾವಡೇಕರ್ ಸ್ಪಷ್ಟಪಡಿಸಿದ್ದಾರೆ.
ಪ್ರಧಾನಿಗಳ ಸ್ವಾತಂತ್ರೊéàತ್ಸವ ಭಾಷಣದಲ್ಲಿ “ಮಹಿಳೆಯರ ಸುರಕ್ಷತೆ, ಭ್ರಷ್ಟಾಚಾರ ನಿರ್ಮೂಲನೆ, ಸ್ವತ್ಛತೆ, ಅನಕ್ಷರತೆ ನಿವಾರಣೆ, ಶಿಕ್ಷಣ ಸಹಿತ ಹಲವು ವಿಷಯಗಳಿರಬೇಕು’ ಎಂದು ದೇಶದ ಬಹುತೇಕ ನಾಗರಿಕರು ಸಲಹೆ ನೀಡಿದ್ದಾರೆ. ಸ್ವಾತಂತ್ರೊéàತ್ಸವ ಭಾಷಣದಲ್ಲಿ ಏನೆಲ್ಲ ಇರಬೇಕು ಎಂಬ ಬಗ್ಗೆ ಪ್ರಧಾನಿ ಮೋದಿ ದೇಶದ ನಾಗರಿಕರ ಸಲಹೆ ಕೇಳಿದ್ದರು.