Advertisement

ಮಮತಾ ಡೆವಲಪರ್: ಮೂಲ್ಕಿ: ಶಾಂಭವಿ ಹೈಟ್ಸ್‌ಗೆ ಶಿಲಾನ್ಯಾಸ

12:19 PM Mar 06, 2017 | Team Udayavani |

ಮೂಲ್ಕಿ: ಮಧ್ಯಮ ವರ್ಗದ ಜನರಿಗಾಗಿ ಸಣ್ಣ ಬಜೆಟ್‌ನ ಮನೆಗಳನ್ನು ನಿರ್ಮಿಸುವ ಜತೆಗೆ ಕೇಂದ್ರ ಸರಕಾರದ ಮಹತ್ವದ ಕಾರ್ಯಕ್ರಮವಾದ ಸರ್ವರಿಗೂ ಮನೆ ಒದಗಿಸುವ ಮಹತ್ವದ ಯೋಜನೆಯಲ್ಲಿ ದೇಶಕ್ಕೆ ಕೊಡುಗೆ ನೀಡುವ ಪ್ರಯತ್ನ ಕಟ್ಟಡ ನಿರ್ಮಾಣಕಾರರ ಮೂಲಕ ನಡೆದಿದೆ ಎಂದು ಕೆನರಾ ಬ್ಯಾಂಕಿನ ಮಂಗಳೂರು ಸರ್ಕಲ್‌ ಕಚೇರಿಯ ಡಿಜಿಎಂ ಎಸ್‌.ಡಿ. ಬಿರದಾರ್‌ ಹೇಳಿದರು.

Advertisement

ಅವರು ಮೂಲ್ಕಿ ಅಕ್ಕಸಾಲಿಗರ ಕೇರಿಯ ಶ್ರೀ ವೆಂಕಟರಮಣ ದೇವಸ್ಥಾನ ರಸ್ತೆಯಲ್ಲಿ ಮಮತಾ ಡೆವಲಪರ್ ಮೂಲಕ ನೂತನವಾಗಿ ನಿರ್ಮಸಲಿರುವ ಸುಲಭ ಬಜೆಟ್‌ನ ವಸತಿ ಸಂಕೀರ್ಣ ಶಾಂಭವಿ ಹೈಟ್ಸ್‌ನ ಮಾಹಿತಿ ಪತ್ರವನ್ನು (ಬ್ರೋಶರ್‌) ಬಿಡುಗಡೆಗೊಳಿಸಿ ಮಾತನಾಡಿದರು. 24 ಲಕ್ಷ ರೂ. ವರೆಗಿನ ಮನೆ ಸಾಲಗಳಿಗೆ ಕೇಂದ್ರಸರಕಾರ ಬಜೆಟ್‌ನಲ್ಲಿ  ಸಬ್ಸಿಡಿ ಘೋಷಿಸುವ ಮೂಲಕ ಜನರು ಸುಲಭವಾಗಿ ಮನೆ ಪಡೆದುಕೊಳ್ಳು ಅವಕಾಶ ಮಾಡಿಕೊಟ್ಟಿದೆ. ಇಂತಹ ಮನೆಖರೀದಿದಾರರು ನಮ್ಮ ಬ್ಯಾಂಕಿನ ಮೂಲಕ ಮನೆ ಸಾಲಕ್ಕೆ ಗ್ರಾಹಕರಾಗಿ ಬಂದಲ್ಲಿ ಬ್ಯಾಂಕಿನ ವ್ಯವಸ್ಥೆಯೊಳಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಬಿರದಾರ್‌ ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಆಧ್ಯಕ್ಷ ಹರಿಕೃಷ್ಣ ಪುನರೂರು ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಮತಾ ಡೆವಲಪರ್‌ನ ಪ್ರೇಮನಾಥ್‌ ಶೆಟ್ಟಿ ಅವರು ಆರ್ಥಿಕವಾಗಿ ಹಿಂದುಳಿದ ಜನರಿಗೆ ಸುಲಭವಾಗಿ ಮನೆ ನಿರ್ಮಿಸಿಕೊಡುವ ಮೂಲಕ ತನ್ನ ವ್ಯವಹಾರದ ಜತೆಗೆ ಮೂಲ್ಕಿ ನಗರವನ್ನು ಬೆಳೆಸುವ ಪ್ರಯತ್ನ ಮಾಡಿದ್ದಾರೆ ಎಂದು ಶ್ಲಾ ಸಿದರು.

ಪಡುಬಿದ್ರಿ ಶ್ರೀ ಖಡೆಶ್ವರೀ ಬ್ರಹ್ಮಸ್ಥಾನದ ಪ್ರಧಾನ ಪಾತ್ರಿ ಪಿ.ಜಿ. ನಾರಾಯಣ ಭಟ್‌ ಶಿಲಾನ್ಯಾಸ ನೆರವೇರಿಸಿದರು. ಧಾರ್ಮಿಕ ವಿಧಿ ವಿಧಾನಗಳನ್ನು ಕೊಲಕಾಡಿ ವಾದಿರಾಜ ಭಟ್‌ ನಡೆಸಿದರು. ಕೆನರಾ ಬ್ಯಾಂಕಿನ ಮೂಲ್ಕಿ ಹಿರಿಯ ಶಾಖಾಧಿಕಾರಿ ಶ್ರೀಕರ ಪೈ ಮತ್ತು ಕಾರ್‌ಸ್ಟ್ರೀಟ್‌ ಶಾಖೆಯ  ಹಿರಿಯ ಶಾಖಾಧಿಕಾರಿ ಜನಾರ್ದನ ಭಕ್ತ ಉಪಸ್ಥಿತರಿದ್ದರು.

ಶ್ರೀ ವಿಶ್ವಕರ್ಮ ಕೋ ಆಪರೇಟಿವ್‌ ಬ್ಯಾಂಕಿನ ಅಧ್ಯಕ್ಷ ಹರೀಶ್‌ ಆಚಾರ್ಯ ಮಾತನಾಡಿ, ಸಕಾಲದಲ್ಲಿ ಜನರಿಗಾಗಿ ಸುಲಭವಾಗಿ ಕೈಗೆ ಸಿಗಬಲ್ಲ ಮನೆಯ ಯೋಜನೆ ಸರಕಾರದ ಸವಲತ್ತಿನ ಮೂಲಕ ಜನರಿಗೆ ಸಿಗುವ ಅವಕಾಶ ಮಮತಾ ಡೆವಲಪರ್ ಮೂಲಕ ಬಂದಿದೆ ಎಂದು ಹೇಳಿದರು.
ಮೂಲ್ಕಿ ನ.ಪಂ. ಅಧ್ಯಕ್ಷ ಸುನೀಲ್‌ ಆಳ್ವ ಮಾತನಾಡಿ, ಸರಕಾರದ ಯೋಜನೆಗೆ ಪೂರವಾಗಿರುವ ಈ ನಿರ್ಮಾಣ ಕಾರ್ಯಕ್ಕೆ ನಗರ ಪಂಚಾತ್‌ನಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು. ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಗೋಪಿನಾಥ ಪಡಂಗ ಶುಭ ಹಾರೈಸಿದರು.

Advertisement

ಮೂಲ್ಕಿ ನ.ಪಂ. ಸದಸ್ಯೆ ವಸಂತಿ ಭಂಡಾರಿ ಅತಿಥಿ ಯಾಗಿದ್ದರು. ಮಮತಾ ಡೆವಲಪರ್ ಮುಖ್ಯಸ್ಥರಾದ ಪ್ರೇಮನಾಥ ಶೆಟ್ಟಿ ಮತ್ತು ಮಮತಾ ಪಿ. ಶೆಟ್ಟಿ ಸ್ವಾಗತಿಸಿದರು. ನ್ಯಾಯವಾದಿ ವಿ. ಸತೀಶ್‌ ಕಾಮತ್‌ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next