Advertisement

ಮಮತಾ ಹುಟ್ಟು ಹೋರಾಟಗಾರ್ತಿ;ಕಡೆಗಣಿಸಲು ಅಸಾಧ್ಯವಾದ ಪ್ರಭೆ

12:16 PM Oct 19, 2017 | |

ಹೊಸದಿಲ್ಲಿ: ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ತನ್ನ ತವರು ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲೆ ಪ್ರಶಂಸೆಯ ಸುರಿಮಳೆಗೈದಿದ್ದಾರೆ. ದೀದಿ ಯನ್ನು ಹುಟ್ಟು ಹೋರಾಟಗಾರ್ತಿ ಮತ್ತು ಕಡೆಗಣಿಸಲು ಅಸಾಧ್ಯವಾದ ದಿವ್ಯ ಪ್ರಭೆ ಎಂದು ಬಣ್ಣಿಸಿರುವ ಮುಖರ್ಜಿ, ಅವರಿಂದ ತನಗಾಗಿರುವ ಅವಮಾನದ ಸನ್ನಿವೇಶವನ್ನೂ ನೆನಪಿಸಿಕೊಂಡಿದ್ದಾರೆ. 

Advertisement

“ದ ಕೊಲಿಶನ್‌ ಈಯರ್‌’ ಪುಸ್ತಕದಲ್ಲಿ ಈ ಸನ್ನಿವೇಶವನ್ನು ಮುಖರ್ಜಿ ಹೀಗೆ ವಿವರಿಸಿದ್ದಾರೆ: ಸಭೆಯೊಂದರಿಂದ ಮಮತಾ ಬ್ಯಾನರ್ಜಿ ಸಿಟ್ಟಿನಿಂದ ಅರ್ಧದಲ್ಲೇ ಎದ್ದು ಹೋದರು. ಇದರಿಂದ ನನಗೆ ಅವಮಾನವಾದಂತಾಯಿತು. ನಾನು ಬಹಳ ಕಿರಿಕಿರಿ ಅನುಭವಿಸಿದೆ.

ಆದರೆ, ಮಮತಾ ಬ್ಯಾನರ್ಜಿಯಲ್ಲೊಂದು ದಿವ್ಯವಾದ ಪ್ರಭೆಯಿದೆ. ಆದರೆ ಅದನ್ನು ವಿವರಿಸುವುದು ಅಸಾಧ್ಯ. ಹಾಗೆಂದು ಕಡೆಗಣಿಸುವುದು ಕೂಡ ಸಾಧ್ಯವಿಲ್ಲ. ಅವರು ತಮ್ಮ ರಾಜಕೀಯ ಜೀವನವನ್ನು ನಿರ್ಭಿಡೆಯಿಂದ ಆಕ್ರಮಣಕಾರಿಯಾಗಿ ಕಟ್ಟಿಕೊಂಡು ಬಂದಿದ್ದಾರೆ. ಹೋರಾಟಗಳೇ ಅವರನ್ನು ನಾಯಕಿಯನ್ನಾಗಿ ರೂಪಿಸಿವೆ ಎಂದು ಹೊಗಳಿದ್ದಾರೆ. 

ಮಮತಾ ಬ್ಯಾನರ್ಜಿ ಹುಟ್ಟು ಹೋರಾಟಗಾರ್ತಿ. 1992ರಲ್ಲಿ ನಡೆದ ಪಶ್ಚಿಮ ಬಂಗಾಲದ ಕಾಂಗ್ರೆಸ್‌ ಸಂಘಟನಾತ್ಮಕ ಚುನಾವಣೆಯೇ ಇದನ್ನು ಅತ್ಯಂತ ಸಮರ್ಪಕ ವಾಗಿ ವಿವರಿಸುತ್ತದೆ. ಈ ಚುನಾವಣೆಯಲ್ಲಿ ಮಮತಾಗೆ ಸೋಲಾಗಿತ್ತು. ಆದರೆ ಹಠಾತ್‌ ಮಮತಾ ಬ್ಯಾನರ್ಜಿ ಒಮ್ಮತ ಆಯ್ಕೆಯನ್ನು ಬಿಟ್ಟು ಬಹಿರಂಗ ಚುನಾವಣೆಗೆ ಬೇಡಿಕೆಯಿಟ್ಟರು ಎಂದು ಮುಖರ್ಜಿ ಬರೆದಿದ್ದಾರೆ. 

ಈ ಸೋಲಿನ ಬಳಿಕ ಕೆಲವೊಂದು ವಿಷಯಗಳನ್ನು ಚರ್ಚಿಸುವ ಸಲುವಾಗಿ ಮಮತಾ ಬ್ಯಾನರ್ಜಿಯನ್ನು ಆಹ್ವಾನಿಸಿದ್ದೆ. ಮಾತುಕತೆ ನಡೆಯುತ್ತಿರುವಾಗಲೇ ಸಿಟ್ಟಗೆದ್ದ ಮಮತಾ ಬ್ಯಾನರ್ಜಿ ನನ್ನ ಹಾಗೂ ಉಳಿದ ನಾಯಕರ ವಿರುದ್ಧ ಷಡ್ಯಂತ್ರದ ಆರೋಪ ಹೊರಿಸಿ ಸಂಘಟನಾತ್ಮಕ ಚುನಾವಣೆ ನಡೆಸಲು ಒತ್ಯಾಯಿಸಿದರು. ನಮ್ಮ ಮೇಲೆ ಪಕ್ಷದ ಹುದ್ದೆಗಳನ್ನು ಹಂಚಿಕೊಂಡಿರುವ ಆರೋಪ ಹೊರಿಸಿದರು. ಈ ದಿಢೀರ್‌ ಬೆಳವಣಿಗೆಯಿಂದ ನನಗೆ ಅವಮಾನವಾಯಿತು. ಆದರೆ ಒಮ್ಮತದ ಆಯ್ಕೆಯನ್ನು ಮಮತಾ ಬ್ಯಾನರ್ಜಿ ಒಪ್ಪಿಕೊಳ್ಳಲೇ ಇಲ್ಲ, ಬಹಿರಂಗ ಚುನಾವಣೆಗೆ ಪಟ್ಟು ಹಿಡಿದರು ಮತ್ತು ಸಭೆಯಿಂದ ಹೊರ ನಡೆದರು ಎಂದು ಮುಖರ್ಜಿ ಬರೆದಿದ್ದಾರೆ.

Advertisement

ಚುನಾವಣೆಯ ಫ‌ಲಿತಾಂಶ ಪ್ರಕಟಗೊಂಡ ದಿನ ಅಲ್ಲಿ ನಾನು ಉಪಸ್ಥಿತನಿದ್ದೆ. ನನ್ನ ಬಳಿಗೆ ಬಂದ ಮಮತಾ ಈಗ ನಿಮಗೆ ಸಂತೋಷವಾಯಿತೇ? ನನ್ನನ್ನು ಸೋಲಿಸುವ ನಿಮ್ಮ ಇಚ್ಛೆ  ಈಡೇರಿತೇ? ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು. ನನ್ನನ್ನು ತಪ್ಪು ತಿಳಿದುಕೊಂಡಿದ್ದೀರಿ ಎಂದು ಮನವರಿಕೆ ಮಾಡಿಕೊಳ್ಳಲು ಪ್ರಯತ್ನಿಸಿದೆ. ಆದರೆ ಅವರು ನನ್ನ ಮಾತು ಕೇಳುವ ಸ್ಥಿತಿಯಲ್ಲಿರಲಿಲ್ಲ ಎಂದು ನೆನಪಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next