Advertisement
ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡು ಬಂದಿದ್ದ ಮಮತಾ ಬ್ಯಾನರ್ಜಿ ಪ್ರತಿ ಸುತ್ತಿನಲ್ಲೂ ತಮ್ಮ ಪ್ರಾಬಲ್ಯ ಮೆರೆದರು. ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ತಿಬ್ರೆವಾಲಾ ಯಾವ ಹಂತದಲ್ಲೂ ದೀದಿ ಪಡೆದ ಮತಗಳ ಸಮೀಪವೂ ಬರಲಾಗಿಲ್ಲ. ಅಂತಿಮವಾಗಿ 21 ಹಂತಗಳ ಎಣಿಕೆಯ ಬಳಿಕ ಮಮತಾ ಬ್ಯಾನರ್ಜಿ 84709 ಮತ ಪಡೆದು, ಬಿಜೆಪಿ ಅಭ್ಯರ್ಥಿಯಿಂದ 58389 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಬಿಜೆಪಿಯ ಪ್ರಿಯಾಂಕಾ 26320 ಮತಗಳನ್ನಷ್ಟೇ ಪಡೆದರು.
Related Articles
Advertisement
ಮಮತಾ ಬ್ಯಾನರ್ಜಿಯ ಕೋಲ್ಕತ್ತಾದ ನಿವಾಸದ ಹೊರಗಡೆ ಟಿಎಂಸಿ ಬೆಂಬಲಿಗರು ನೆರೆದಿದ್ದು, ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಇನ್ನು ಈಗಾಗಲೇ ಚುನಾವಣಾ ಆಯೋಗವು ಯಾವುದೇ ಸಂಭ್ರಮಾಚರಣೆ ಅಥವಾ ಮೆರವಣಿಗೆಗೆ ಅವಕಾಶವಿಲ್ಲ ಎಂದು ಹೇಳಿದೆ.
ಮಮತಾ ಬ್ಯಾನರ್ಜಿ ಜಯದ ಬಗ್ಗೆ ಸಹೋದರ ಕಾರ್ತಿಕ್ ಸಂತಸ ವ್ಯಕ್ತಪಡಿಸಿದ್ದಾರೆ. “ಇಲ್ಲಿ ಟಿಎಂಸಿ ಅಲ್ಲದೇ ಬೇರೆ ಯಾವ ಪಕ್ಷಕ್ಕೂ ಒಂದು ಸ್ಥಾನವಿಲ್ಲ. ತೃಣಮೂಲ ಕಾಂಗ್ರೆಸ್ ಪಕ್ಷ ಹಾಗೂ ದೀದಿ ಜನರಿಗಾಗಿ ಕಾರ್ಯ ನಿರ್ವಹಣೆ ಮಾಡುತ್ತಾರೆ. ದೆಹಲಿಯಲ್ಲಿ (ಕೇಂದ್ರ) 2024 ರಲ್ಲಿ ನಾವು ಸರ್ಕಾರವನ್ನು ರಚನೆ ಮಾಡುತ್ತೇವೆ,” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.