Advertisement

ಮಮತಾ ಬ್ಯಾನರ್ಜಿ ವೆಡ್ಸ್‌ ಸೋಶಿಯಲಿಸಂ!

03:18 AM Jun 12, 2021 | Team Udayavani |

ಚೆನ್ನೈ: ಕಮ್ಯೂನಿಸ್ಟರು ಮತ್ತು ಮಮತಾ ಬ್ಯಾನರ್ಜಿ ಎಂದರೆ ಪಶ್ಚಿಮ ಬಂಗಾಲದಲ್ಲಿ ಹಾವು-ಮುಂಗುಸಿಯಿದ್ದಂತೆ ಇರಬಹುದು… ಆದರೆ, ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ಇವರಿಬ್ಬರದ್ದೂ ಹಾಲು-ಜೇನಿನ ಸಂಬಂಧ!

Advertisement

ಹೌದು. ಜೂ.13ರಂದು ಸೇಲಂನಲ್ಲಿ “ಸೋಶಯಲಿಸಂ’ ಎಂಬ ಯುವಕ “ಮಮತಾ ಬ್ಯಾನರ್ಜಿ’ ಎಂಬ ಯುವತಿಯನ್ನು ವರಿಸಲಿದ್ದಾನೆ. ಈ ವಿವಾಹವು ವರನ ಸಹೋದರರಾದ “ಕಮ್ಯೂನಿಸಂ’ ಮತ್ತು “ಲೆನಿನಿಸಂ’ನ ಸಮ್ಮುಖದಲ್ಲೇ ನಡೆಯಲಿದೆ.

ಅಂದ ಹಾಗೆ, ಈ ಕುಟುಂಬದ ಮೊಮ್ಮಗ “ಮಾರ್ಕ್ಸಿಸಂ’ ಕೂಡ ಈ ಮದುವೆಗೆ ಸಾಕ್ಷಿಯಾಗಲಿದ್ದಾನೆ… ಈ ಎಲ್ಲ “ಇಸಂ’ಗಳ ನಡುವೆಯೇ ನಡೆಯುತ್ತಿರುವ ವಿವಾಹದ ಆಮಂತ್ರಣ ಪತ್ರವು ದೇಶಾದ್ಯಂತ ವೈರಲ್‌ ಆಗಿದೆ.

ಮದುಮಗ ಸೋಶಿಯಲಿಸಂನ ತಂದೆ ಮೋಹನ್‌ (52) ಪ್ರಸ್ತುತ ಸೇಲಂನ ಸಿಪಿಐ ಜಿಲ್ಲಾ ಕಾರ್ಯದರ್ಶಿ. ಕಮ್ಯೂನಿಸ್ಟ್‌ ಸಿದ್ಧಾಂತ ನಂಬಿಕೊಂಡು ಬಂದ ಹಿನ್ನೆಲೆಯಲ್ಲಿ ಅವರು ತಮ್ಮ ಮೂವರು ಗಂಡು ಮಕ್ಕಳಿಗೂ ಕಮ್ಯೂನಿಸಂ, ಲೆನಿನಿಸಂ ಮತ್ತು ಸೋಶಿಯಲಿಸಂ ಎಂದು ಹೆಸರಿಟ್ಟಿದ್ದರು. ವಧುವಿನ ಕುಟುಂಬವು ಹಿಂದಿನಿಂದಲೂ ಕಾಂಗ್ರೆಸ್‌ ಅನ್ನೇ ಬೆಂಬಲಿಸುತ್ತಾ ಬಂದಿದ್ದು, ತಮ್ಮ ಪುತ್ರಿಗೆ ಮಮತಾ ಬ್ಯಾನರ್ಜಿ (ಅವರು ಕಾಂಗ್ರೆಸ್‌ನಿಂದಲೇ ರಾಜಕೀಯ ಪ್ರಯಾಣ ಆರಂಭಿಸಿದ್ದು) ಎಂದು ಹೆಸರಿಟ್ಟಿತ್ತು.

Advertisement

Udayavani is now on Telegram. Click here to join our channel and stay updated with the latest news.

Next