ಮುಂಬೈ: ಭಾರೀ ಮಳೆಯಿಂದಾಗಿ ಮುಂಬೈ ಮತ್ತು ಇತರ ನಗರಗಳು ತತ್ತರಿಸಿಹೋಗಿದ್ದು, ಭಾರತೀಯ ಹವಾಮಾನ ಇಲಾಖೆ ಮಂಗಳವಾರ (ಜುಲೈ 12) ಆರೆಂಜ್ ಅಲರ್ಟ್ ಘೋಷಿಸಿತ್ತು. ಮಳೆಯ ಪರಿಣಾಮ ಅಂಧೇರಿ ಮತ್ತು ಭೋಯಿವಾಡಾದ ತಗ್ಗುಪ್ರದೇಶಗಳು ಸಂಪೂರ್ಣವಾಗಿ ಜಲಾವೃತಗೊಂಡಿದೆ.
ಕೋಲ್ಕತಾ: ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಫೋಟಕ ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುವುದು ಸಾಮಾನ್ಯ, ಆದರೆ ಅದಕ್ಕೆ ಅಪವಾದ ಎಂಬಂತೆ ಮೂರು ದಿನಗಳ ಡಾರ್ಜಿಲಿಂಗ್ ಭೇಟಿಗಾಗಿ ಆಗಮಿಸಿರುವ ಸಂದರ್ಭದಲ್ಲಿ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರಿಗೆ ಸ್ವತಃ ಪಾನಿ ಪುರಿಯನ್ನು ವಿತರಿಸುವ ಮೂಲಕ ಸುದ್ದಿಯಾಗಿದ್ದಾರೆ.
ಸೋಮವಾರದಿಂದ (ಜುಲೈ 11) ಮೂರು ದಿನಗಳ ಡಾರ್ಜಿಲಿಂಗ್ ಭೇಟಿಗಾಗಿ ಮಮತಾ ಬ್ಯಾನರ್ಜಿ ಆಗಮಿಸಿದ್ದರು. ಗೂರ್ಖಾಲ್ಯಾಂಡ್ ಪ್ರಾದೇಶಿಕ ಆಡಳಿತ(ಜಿಟಿಎ)ದಲ್ಲಿ ಇತ್ತೀಚೆಗೆ ನೂತನವಾಗಿ ಆಯ್ಕೆಯಾದ 45 ಟಿಎಂಸಿ ಸದಸ್ಯರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸುವುದು ಬ್ಯಾನರ್ಜಿ ಅವರ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಂದು ಮಧ್ಯಾಹ್ನ ಡಾರ್ಜಿಲಿಂಗ್ ನಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಮಮತಾ ಬ್ಯಾನರ್ಜಿ ಪಾಲ್ಗೊಂಡಿದ್ದರು. ಗುರುವಾರ ಸಿಎಂ ಬ್ಯಾನರ್ಜಿ ಅವರು ಕೋಲ್ಕತಾಗೆ ಮರಳಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ರಿಚ್ಮಂಡ್ ಹಿಲ್ ಪ್ರದೇಶದಿಂದ ಡಾರ್ಜಿಲಿಂಗ್ ಮೃಗಾಲಯದತ್ತ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಸಾಲು, ಸಾಲು ಪಾನಿ ಪುರಿ ಅಂಗಡಿಗಳಿರುವುದನ್ನು ಗಮನಿಸಿದ ಸಿಎಂ ಮಮತಾ ಬ್ಯಾನರ್ಜಿ, ನಂತರ ವಾಹನದಿಂದ ಇಳಿದು ಅಲ್ಲಿ ನೆರೆದಿದ್ದ ಮಕ್ಕಳು, ಮಹಿಳೆಯರು, ಹಿರಿಯರಿಗೆ ತಾವೇ ಖುದ್ದು ಪಾನಿ ಪುರಿ ವಿತರಿಸಿರುವುದಾಗಿ ವರದಿ ವಿವರಿಸಿದೆ.