Advertisement

ನಂದಿಗ್ರಾಮ ಸೋಲು: ಸುವೇಂದು ಅಧಿಕಾರಿ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಮತಾ

08:46 AM Jun 18, 2021 | Team Udayavani |

ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತನ್ನ ಮಾಜಿ ಆಪ್ತ, ಸದ್ಯದ ವಿರೋಧಿ ಸುವೇಂಧು ಅಧಿಕಾರಿ ವಿರುದ್ದ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮದಲ್ಲಿ ಅಧಿಕಾರಿ ವಿರುದ್ದ ಉಂಟಾದ ಸೋಲನ್ನು ಪ್ರಶ್ನಿಸಿ ಮಮತಾ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್ ಇದರ ವಿಚಾರಣೆಯನ್ನು ಇಂದು ಕೈಗೆತ್ತಿಕೊಳ್ಳಲಿದೆ.

Advertisement

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ಅವರು ಮಮತಾ ಬ್ಯಾನರ್ಜಿ ವಿರುದ್ಧ 2000ಕ್ಕೂ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಈ ಗೆಲುವನ್ನು ಪ್ರಶ್ನಿಸಿರುವ ದೀದಿ, ಭ್ರಷ್ಟಾಚಾರ, ಹಣ ಹಂಚಿಕೆ, ದ್ವೇಷ ಮತ್ತು ಶತ್ರುತ್ವ ಹರಡುವಿಕೆ, ಧರ್ಮದ ಆಧಾರದಲ್ಲಿ ಚುನಾವಣೆ ಮುಂತಾದ ಆರೋಪಗಳನ್ನು ಅಧಿಕಾರಿ ವಿರುದ್ದ ಮಾಡಿ  ಕೋರ್ಟ್ ಮೆಟ್ಟಿಲೇರಿದ್ದಾರೆ.

ಇದನ್ನೂ ಓದಿ:ಬಿಎಸ್‌ವೈಗೆ ಶಾಸಕರ ಸಾಥ್‌ : 53 ಶಾಸಕರ ಅಭಿಮತ ಸಂಗ್ರಹಿಸಿದ ಅರುಣ್‌ ಸಿಂಗ್‌

ಮತ ಎಣಿಕೆ ಅಂತ್ಯವಾದ ಕೂಡಲೇ ಮಮತಾ ಬ್ಯಾನರ್ಜಿ ಮರು ಎಣಿಕೆ ಮಾಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ಆದರೆ ಆಯೋಗ ಇದನ್ನು ತಿರಸ್ಕರಿಸಿತ್ತು.

“ಸುವೇಂದು ಅಧಿಕಾರಿಯು ಹಲವಾರು ಭ್ರಷ್ಟ ಅಭ್ಯಾಸಗಳಲ್ಲಿ ತೊಡಗಿಸಿಕೊಂಡಿದ್ದು, ಅದು ಅವರ ಗೆಲುವಿನ ಅವಕಾಶಗಳನ್ನು ಹೆಚ್ಚಿಸಿದೆ ಎಂದು ಮಮತಾ ಆರೋಪಿಸಿದ್ದಾರೆ. ಮೂರು ದಿನಗಳ ಹಿಂದೆ ಈ ಪ್ರಕರಣವನ್ನು ದಾಖಲಿಸಲಾಗಿದ್ದು, ಇಂದು ಈ ವಿಷಯವನ್ನು ನ್ಯಾಯಮೂರ್ತಿ ಕೌಸಿಕ್ ಚಂದಾ ಅವರು ವಿಚಾರಣೆ ನಡೆಸಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next