Advertisement

ಆ.9ರಿಂದ “ಬಿಜೆಪಿ ತೊಲಗಿಸಿ’ಆಂದೋಲನ

08:30 AM Jul 22, 2017 | |

ಕೋಲ್ಕತಾ:  ಕೇಂದ್ರ ಸರಕಾರದ ವಿರುದ್ಧ ಹರಿಹಾಯುತ್ತಲೇ ಇರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಇದೀಗ, “ಬಿಜೆಪಿ ತೊಲಗಿಸಿ’ ಆಂದೋಲನ ಆರಂಭಿಸಲು ಹೊರಟಿದ್ದಾರೆ.

Advertisement

ಆ.9ರಿಂದಲೇ ಇಂಥ ಆಂದೋಲನ ನಡೆಸುವುದಾಗಿ ಅವರು ಶುಕ್ರವಾರ ಘೋಷಿಸಿದ್ದಾರೆ. ಕೇಸರಿ ಪಕ್ಷವನ್ನು ವಿರೋಧಿಸುವ ಎಲ್ಲ ಪಕ್ಷಗಳ ಜೊತೆ ಬಂಗಾಳ ನಿಲ್ಲುತ್ತದೆ ಎಂದೂ ಅವರು ಹೇಳಿದ್ದಾರೆ. ವಿದೇಶಗಳ ಜೊತೆ ಉತ್ತಮ ಸಂಬಂಧ ಸೇರಿದಂತೆ ಎಲ್ಲ ವಿಚಾರಗಳಲ್ಲೂ ಬಿಜೆಪಿ ಸಂಪೂರ್ಣ ವಿಫ‌ಲವಾಗಿದೆ ಎಂದು ಆರೋಪಿಸಿರುವ ಮಮತಾ, “ಬಂಗಾಳಕ್ಕೆ ಹೊಂದಿಕೊಂಡಿರುವ ನೇಪಾಲ, ಭೂತಾನ್‌, ಬಾಂಗ್ಲಾದೇಶಗಳ ಜೊತೆ ವಿದೇಶಾಂಗ ಸಂಬಂಧ ಸುಧಾರಿಸಲು ಏಕೆ ಕೇಂದ್ರ ಸರಕಾರ ಪ್ರಯತ್ನಿಸುತ್ತಿಲ್ಲ’ ಎಂದೂ ಪ್ರಶ್ನಿಸಿದ್ದಾರೆ.

ಸಿಎಂ ಮಮತಾ ಅವರ ಅಭಿಯಾನ ಕುರಿತು ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್‌ ಘೋಷ್‌ ಅವರು, “ತೃಣಮೂಲ ಕಾಂಗ್ರೆಸ್‌ ಪಕ್ಷವು ತ್ರಿಪುರಾದಲ್ಲಿ ಕೇವಲ ನಾಮಫ‌ಲಕವಾಗಿ ಉಳಿದಿದೆ. ಇದು ಮಮತಾಗೆ ಗೊತ್ತಿರಲಿ. ಅವರ ಓಲೈಕೆ ಮತ್ತು ಕೋಮು ರಾಜಕಾರಣದ ವಿರುದ್ಧ ಹೋರಾಡಲು ಬಿಜೆಪಿ ಸಿದ್ಧವಿದೆ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next