Advertisement

ಮಮತಾ ಬ್ಯಾನರ್ಜಿಗೆ ಬಿಜೆಪಿಯಿಂದ 10 ಲಕ್ಷ ಜೈ ಶ್ರೀರಾಮ್‌ ಕಾರ್ಡ್‌ಗಳು !

09:30 AM Jun 03, 2019 | Team Udayavani |

ಕೋಲ್ಕತಾ : ಪಶ್ಚಿಮ ಬಂಗಾಳದಲ್ಲಿ ರಾಮ ರಾಜಕೀಯ ತೀವ್ರವಾಗುತ್ತಿದ್ದುಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿ ಮಮತಾ ಬ್ಯಾಜರ್ಜಿ ಅವರಿಗೆಜೈ ಶ್ರೀರಾಮ್‌ ಎಂದು ಬರೆಯಲಾಗಿರುವ 10 ಲಕ್ಷ ಪೋಸ್ಟ್‌ ಕಾರ್ಡ್‌ಗಳನ್ನು ಕಳುಹಿಸಲು ಮುಂದಾಗಿದೆ.

Advertisement

ಬಿಜೆಪಿ ಸಂಸದ ಅರ್ಜುನ್‌ ಸಿಂಗ್‌ ಮಾತನಾಡಿ , ಮಮತಾ ಬ್ಯಾನರ್ಜಿ ಅವರು ಜೈ ಶ್ರೀರಾಮ್‌ ಎಂದು ಬರೆದಿರುವ 10 ಮಂದಿಯನ್ನು ಬಂಧಿಸಿದ್ದಾರೆ. ನಾವು ಜೈ ಶ್ರೀರಾಮ್‌ ಎಂದು ಬರೆದಿರುವ 10 ಲಕ್ಷ ಕಾರ್ಡ್‌ಗಳನ್ನುಕಳುಸಿಸುತ್ತೇವೆ. 10 ಲಕ್ಷ ಮಂದಿಯನ್ನು ಬಂಧಿಸುತ್ತಾರೆಯೇ . ಮಮತಾ ಬ್ಯಾನರ್ಜಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರದಕಾವಿನೊಂದಿಗೆ ಜೈ ಶ್ರೀರಾಮ್‌ ಎನ್ನುವ ಘೋಷಣೆಗಳು ತೀವ್ರವಾಗಿದ್ದವು. ಮಮತಾ ಬ್ಯಾನರ್ಜಿ ಅವರ ಕಾರಿನ ಎದುರು ಜೈ ಶ್ರೀರಾಮ್‌ ಘೋಷಣೆಗಳನ್ನು ಕೂಗಲಾಗಿತ್ತು. ಇದು ದೀದಿ ಅವರನ್ನು ಕೆರಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next