Advertisement

ದೀದಿ ನಾಮಪತ್ರ ರದ್ದು ಮಾಡಿ: ಬಿಜೆಪಿ

09:53 PM Sep 14, 2021 | Team Udayavani |

ಕೋಲ್ಕತಾ: ಪಶ್ಚಿಮ ಬಂಗಾಳದ ಭವಾನಿಪುರದಿಂದ ಸ್ಪರ್ಧಿಸಿರುವ ಸಿಎಂ ಮಮತಾ ಬ್ಯಾನರ್ಜಿ ನಾಮಪತ್ರ ರದ್ದು ಮಾಡಬೇಕೆಂದು ಬಿಜೆಪಿ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.

Advertisement

ಸಿಎಂ ತಮ್ಮ ವಿರುದ್ಧ ದಾಖಲಾಗಿರುವ 5 ಪ್ರಕರಣಗಳನ್ನು ನಾಮಪತ್ರ ಸಲ್ಲಿಕೆ ವೇಳೆ ನಮೂದಿಸಿಲ್ಲ ಎಂದು ಬಿಜೆಪಿ ದೂರಿದೆ.

ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ಟಿಬರೆವಾಲ್‌ ಆಯೋಗಕ್ಕೆ ದೂರು ನೀಡಿ, ಪ್ರಕರಣಗಳ ವಿವರಗಳನ್ನು ನೀಡಿದ್ದಾರೆ. ಆದರೆ ಈ ಕುರಿತಾಗಿ ಚುನಾವಣಾ ಆಯೋಗ ಈಗಾಗಲೇ ತನಿಖೆ ನಡೆಸಿದ್ದು, ಬಾಕಿಯಿರುವ ಪ್ರಕರಣಗಳಲ್ಲಿ ಆರೋಪಿ ಸ್ಥಾನದಲ್ಲಿರುವುದು ಸಿಎಂ ಮಮತಾ ಅಲ್ಲ ಎನ್ನುವುದನ್ನು ಖಚಿತ ಪಡಿಸಿಕೊಂಡಿದೆ ಎಂದು ಟಿಎಂಸಿ ಹೇಳಿದೆ.

ಇದನ್ನೂ ಓದಿ:ಜಾರಕಿಹೊಳಿ ಸಿಡಿ ಪ್ರಕರಣ: ವಿಚಾರಣೆ ಮುಂದಕ್ಕೆ

ಮತ್ತೊಂದೆಡೆ,ಉತ್ತರ 24 ಪರಗಣದಲ್ಲಿರುವ ಬಿಜೆಪಿ ಸಂಸದ ಅರ್ಜುನ್‌ ಸಿಂಗ್‌ ಟಿಎಂಸಿ ತಮ್ಮನ್ನು ಬಾಂಬ್‌ಗಳನ್ನು ಇರಿಸಿ ಕೊಲ್ಲಲು ಮುಂದಾಗಿದೆ ಎಂದು ಆರೋಪಿಸಿದ್ದಾರೆ. ಅವರ ನಿವಾಸದ ಸಮೀಪವೇ ಬಾಂಬ್‌ ಸ್ಫೋಟಗೊಂಡದ್ದರಿಂದ ಈ ಆರೋಪ ಮಾಡಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next