Advertisement

ಬಿಬಿಎಂಪಿ ಚುನಾವಣೆಗೆ ಆಕ್ರಮ ಹಣ ಸಂಗ್ರಹಕ್ಕೆ 4ಜಿ ಬಳಕೆ..!

12:15 PM Dec 15, 2021 | Team Udayavani |

ಬೆಂಗಳೂರು: ಬಿಜೆಪಿ ಸರ್ಕಾರ 4ಜಿ ವಿನಾಯಿತಿ ಬಳಸಿಕೊಂಡು ಟೆಂಡರ್‌ ಕರೆಯದೇ ಗುತ್ತಿಗೆ ನೀಡುವುದರ ಮೂಲಕ ಮುಂಬರುವ ಬಿಬಿಎಂಪಿ ಚುನಾವಣೆಗೆ ಅಕ್ರಮ ಹಣ ಸಂಪಾದಿಸುತ್ತಿದೆ ಎಂದು ಆಮ್‌ ಆದ್ಮಿ ಪಕ್ಷದ ನಗರಾಧ್ಯಕ್ಷ ಮೋಹನ್‌ ದಾಸರಿ ಆಗ್ರಹಿಸಿದರು.

Advertisement

ಮಂಗಳವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಟೆಂಡರ್‌ ಕರೆಯದೇ ಕಾಮ ಗಾರಿಗಳ ಗುತ್ತಿಗೆ ನೀಡಿ ಶೇ.40 ರಷ್ಟು ಕಮಿಷನ್‌ ಪಡೆಯುವುದಕ್ಕೆ ಸರ್ಕಾರ ಕಡಿವಾಣ ಹಾಕಬೇಕು. ಬಿಬಿಎಂಪಿಗೆ ರಾಜ್ಯ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಯಡಿ ಹಣ ನೀಡದೆ, ಎಲ್ಲಾ ಕಾಮಗಾರಿಗಳನ್ನು ಟೆಂಡರ್‌ ಮೂಲಕವೇ ನಡೆಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.

ಮಳೆಯಿಂದಾಗಿ ರಸ್ತೆಗಳು ಹಾಳಾಗಿರುವುದರಿಂದ ಬಿಬಿಎಂಪಿ 1,171 ಕೋಟಿ ರೂ. ಅನುದಾನವನ್ನು 4ಜಿ ವಿನಾಯಿತಿಯಡಿ ನೀಡಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಇದರಿಂದಾಗಿ ಹೆಚ್ಚು ಹಣವನ್ನು ಲೂಟಿ ಮಾಡುವ ಮುಂದಾಗಿರುವ ಸರ್ಕಾರಕ್ಕೆ ಆಮ್‌ ಆದ್ಮಿ ಪಕ್ಷ ಕಡಿವಾಣ ಹಾಕಲಾಗುವುದು ಎಂದು ಪಕ್ಷದ ನಗರ ಉಪಾಧ್ಯಕ್ಷ ಸುರೇಶ್‌ ರಾಥೋಡ್‌ಎಚ್ಚರಿಸಿದರು. ಕಳಪೆ ರಸ್ತೆ ಕಾಮಗಾರಿ ಮಾಡಿದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next