ಕಾರವಾರ: ನಾಲ್ಕೂವರೆ ತಿಂಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿ ನಂತರ ಮಹಾರಾಷ್ಟ್ರದ ಮಲ್ವಾಣ ವ್ಯಾಪ್ತಿಯ ಸಮುದ್ರದಾಳದಲ್ಲಿ ಮೇ 1ರಂದು ಪತ್ತೆಯಾದ ಮೀನುಗಾರಿಕಾ ಬೋಟ್ ‘ಸುವರ್ಣ ತ್ರಿಭುಜ್’ನ ಚಿತ್ರಗಳನ್ನು ನೌಕಾಪಡೆ ಗುರುವಾರ ಬಿಡುಗಡೆ ಮಾಡಿದೆ.
ಈ ಬೋಟ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಲಕ್ಷ ್ಮಣ, ರವಿ, ಸತೀಶ, ಹರೀಶ, ರಮೇಶ ಹಾಗೂ ಉಡುಪಿಯ ಚಂದ್ರಶೇಖರ ಮತ್ತು ದಾಮೋದರ್ ಸೇರಿದಂತೆ ಒಟ್ಟು ಏಳು ಮೀನುಗಾರರು ಇದ್ದರು. ಇವರೆಲ್ಲರೂ ಜಲಸಮಾಧಿ ಯಾದರೇ ಎಂಬ ಬಗ್ಗೆ ಮಾಹಿತಿ ಹೊರಬಿದ್ದಿಲ್ಲ.
Advertisement
2018ರ ಡಿ.13ರಂದು ಉಡುಪಿಯ ಮಲ್ಪೆ ಮೀನುಗಾರಿಕಾ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ‘ಸುವರ್ಣ ತ್ರಿಭುಜ್’ ಬೋಟ್ ನಿಗೂಢವಾಗಿ ಕಣ್ಮರೆಯಾಗಿತ್ತು. ಕಾಣೆಯಾಗಿದ್ದ ಏಳು ಮೀನುಗಾರರು ಹಾಗೂ ಬೋಟ್ ಪತ್ತೆಗೆ ನೌಕಾದಳ ವ್ಯಾಪಕ ಹುಡುಕಾಟ ನಡೆಸಿತ್ತು. 4 ತಿಂಗಳ ನಂತರ ನೌಕಾದಳಕ್ಕೆ ಸೇರಿದ ಐಎನ್‌ಎಸ್ ನಿರೀಕ್ಷಕ್ ನೌಕೆ ‘ಸುವರ್ಣ ತ್ರಿಭುಜ್’ ಬೋಟ್ನ್ನು ಮಹಾರಾಷ್ಟ್ರದ ಮಲ್ವಾಣ ಕರಾವಳಿಯಲ್ಲಿ ಪತ್ತೆ ಹಚ್ಚಿತ್ತು. ಮಾಲ್ವಾಣ ಕರಾವಳಿಯಿಂದ 33 ನಾಟಿಕಲ್ ಮೈಲ್ ದೂರದಲ್ಲಿ ಸುಮಾರು 60 ಮೀಟರ್ ಸಮುದ್ರದಾಳದಲ್ಲಿ ನೌಕಾದಳದ ಮುಳುಗು ತಜ್ಞರು ಬೋಟ್ ಪತ್ತೆ ಹಚ್ಚಿದ್ದರು. ಈಗ ಭಾರತೀಯ ನೌಕಾಪಡೆಯು ಸಮುದ್ರದಾಳದಲ್ಲಿರುವ ಬೋಟ್‌ನ ಅವಶೇಷಗಳ ಚಿತ್ರವನ್ನು ಬಿಡುಗಡೆ ಮಾಡಿದೆ.
ನೌಕಾಪಡೆ ಮುಖ್ಯಸ್ಥರಿಗೆ ಪತ್ರ
ಬೆಂಗಳೂರು: ‘ಸುವರ್ಣ ತ್ರಿಭುಜ್ ಬೋಟ್ ನೌಕಾಪಡೆಯ ಹಡಗಿನಿಂದ ಹಾನಿಗೊಳಗಾಗಿದೆಯೇ ಎನ್ನುವುದರ ಬಗ್ಗೆ ನೌಕಾ ಪಡೆ ಮುಖ್ಯಸ್ಥರಿಗೆ ಎರಡು ದಿನದಲ್ಲಿ ಪತ್ರ ಬರೆದು ಮಾಹಿತಿ ಪಡೆಯಲಾಗು ವುದು’ ಎಂದು ಗೃಹ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಮೀನುಗಾರರ ಬಗ್ಗೆ ಇನ್ನೂ ಸುಳಿವು ಸಿಕ್ಕಿಲ್ಲ. ನೌಕಾಪಡೆಯ ಹಡಗು ಹೊಡೆದ ಪರಿಣಾಮವಾಗಿಯೇ ಬೋಟ್ ಪತನವಾಗಿದೆಯೇ ಎನ್ನುವುದರ ಬಗ್ಗೆಯೂ ಮಾಹಿತಿ ಕಲೆ ಹಾಕುವ ಪ್ರಯತ್ನ ನಡೆದಿದೆ’ ಎಂದರು.