Advertisement
ಯಾಂತ್ರಿಕ ಮೀನುಗಾರಿಕಾ ಋತು ನಿಷೇಧ ತೆರವುಗೊಂಡು 20 ದಿನ ಕಳೆದರೂ ಹವಾಮಾನದ ವೈಪರೀತ್ಯದಿಂದಾಗಿ ಮಲ್ಪೆ ಬಂದರಿನಲ್ಲಿ ಯಾವುದೇ ಯಾಂತ್ರಿಕ ದೋಣಿಗಳು ಕಡಲಿಗಿಳಿದಿಲ್ಲ. ಕೆಲವೊಂದು ಆಳಸಮುದ್ರ ಬೋಟ್‌ಗಳು ಮಂಜು ಗಡ್ಡೆ, ಡಿಸೇಲ್ ತುಂಬಿಸಿಕೊಂಡು ಸಿದ್ಧ ಪಡಿಸಿಕೊಂಡಿದ್ದರೂ ಸಮುದ್ರದಲ್ಲಿ ಅಬ್ಬರಿಸುತ್ತಿರುವ ತೂಫಾನ್‌ನಿಂದಾಗಿ ಮೀನುಗಾರಿಕೆಗೆ ತೆರಳಲು ಹಿಂದೇಟು ಹಾಕಿತ್ತು. ಆಳಸಮುದ್ರ, ಪಸೀìನ್, ತ್ರಿಸೆವಂಟಿ, ಸಣ್ಣಟ್ರಾಲ್ ಬೋಟ್ ಸೇರಿದಂತೆ ಸುಮಾರು 2000ಕ್ಕೂ ಅಧಿಕ ದೋಣಿಗಳು ಇನ್ನೂ ಬಂದರಿನಲ್ಲೆ ಉಳಿದುಕೊಂಡಿತ್ತು.
Related Articles
ಈ ಮಧ್ಯೆ ವಾರದ ಹಿಂದೆ ಸಮುದ್ರಕ್ಕೆ ತೆರಳಿದ ಕೆಲವೊಂದು ಆಳಸಮುದ್ರ ದೋಣಿಗಳು ಸಮುದ್ರದಲ್ಲಿ ಅಬ್ಬರದ ಅಲೆಗಳಿಂದ ನೀರಿನ ಒತ್ತಡದಿಂದಾಗಿ ಬಲೆಯನ್ನು ನೀರಿಗಿಳಿಸಲು ಆಸಾಧ್ಯವಾದ್ದರಿಂದ ದೋಣಿಗಳು ಸಮೀಪದ ಬಂದರು ಆಶ್ರಯಿಸಿದ್ದರೆ ಇನ್ನು ಕೆಲವು ಮಲ್ಪೆ ಬಂದರಿಗೆ ವಾಪಾಸಾಗಿವೆ.
Advertisement
ಬೋಟ್ ತೆರವಿಗೂ ಸಮಸ್ಯೆಸಮುದ್ರ ಸಹಜ ಸ್ಥಿತಿಗೆ ತಲುಪಿದ್ದರಿಂದ ಸೋಮವಾರದಿಂದ ಬೋಟುಗಳು ಕಡಲಿಗಿಳಿಯುತ್ತಿವೆ. ಬಂದರಿನಲ್ಲಿ ಬೋಟ್‌ಗಳ ಒತ್ತಡದಿಂದಾಗಿ ದಕ್ಕೆಯಲ್ಲಿ ಬೋಟನ್ನು ತೆರವುಗೊಳಿಸಲು ಸಾಧ್ಯವಾಗುತ್ತಿಲ್ಲ. ಹಿಂಭಾಗ ಬೋಟ್‌ಗಳು ತೆರವಾಗದ ಮಧ್ಯೆ ಸಿಕ್ಕಿ ಹಾಕಿಕೊಂಡಿರುವ ದೋಣಿಗಳಿಗೆ ಮಂಜುಗಡ್ಡೆ, ಡೀಸೆಲ್ ತುಂಬಿಸಲು ಸಮಸ್ಯೆಯಾಗುತ್ತಿದೆ. ಇನ್ನು ಮೂರಾಲ್ಕು ದಿನಗಳಲ್ಲಿ ಈ ಸಮಸ್ಯೆ ಪರಿಹಾರವಾಗಬಹುದು.
-ಕೃಷ್ಣ ಎಸ್. ಸುವರ್ಣ, ಅಧ್ಯಕ್ಷರು ಮಲ್ಪೆ ಮೀನುಗಾರರ ಸಂಘ